ಇಂದು ಮಾಂಡೋವಿ ಮೋಟಾರ್ಸ್‌ನಿಂದ ಸಿಯಾಜ್ ಕಾರ್ಪೊರೇಟ್ ‘ಟ್ಯಾಲೆಂಟ್ ಹಂಟ್’ ಕಾರ್ಯಕ್ರಮ
ಮಂಗಳೂರು, ಆ.27: ಮಾರುತಿ ಸುಝುಕಿ ವಾಹನಗಳ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್ ವತಿಯಿಂದ ಆ.28ರಂದು ಬೆಳಗ್ಗೆ ಸಿಯಾಜ್ ಕಾರ್ಪೊರೇಟ್ ಟ್ಯಾಲೆಂಟ್ ಹಂಟ್ 2016ನ್ನು ಸುರತ್ಕಲ್‌ನ ಹೊಟೇಲ್ ಲಲಿತ್ ಇಂಟರ್‌ನ್ಯಾಶನಲ್ ಆವರಣದಲ್ಲಿ ನಡೆಯಲಿದೆ.
ಈ ಟ್ಯಾಲೆಂಟ್ ಹಂಟ್‌ನಲ್ಲಿ ಸುರತ್ಕಲ್ ಮತ್ತು ಆಸುಪಾಸಿನ ಎಂಆರ್‌ಪಿಎಲ್, ಬಿಪಿಸಿಎಲ್, ಐಓಸಿಎಲ್, ಎಚ್‌ಪಿಸಿಎಲ್, ಎನ್‌ಎಂಪಿಟಿ, ಎನ್‌ಐಟಿಕೆ, ಬಿಎಎಸ್‌ಎಫ್, ಕೆಐಒಸಿಎಲ್, ಇನ್‌ವೆಂಜರ್, ದಿಯಾ ಸಿಸ್ಟಮ್ಸ್, ಕೋಗ್ನಿ ಜೆಂಟ್, ಇನ್ಫೋಸಿಸ್, ಎಂಪಾಸಿಸ್, ಎಂಸಿಎಫ್‌ನ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರುಗಳು ಭಾಗವಹಿಸಲಿರುವರು.
ಈ ‘ಟ್ಯಾಲೆಂಟ್ ಹಂಟ್-2016’ರಲ್ಲಿ ಗ್ರೂಪ್ ಡ್ಯಾನ್ಸ್, ಗ್ರೂಪ್ ಸ್ಕಿಟ್, ಫಿಲ್ಮ್ ಮತ್ತು ಜಾನಪದ ಗಾನಸ್ಪರ್ಧೆ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಮಹಿಳೆಯರು ಮತ್ತು ಪುರುಷರಿಗೆ ಅತ್ಯಾಕರ್ಷಕ ಒಳಾಂಗಣ ಕ್ರೀಡಾಕೂಟಗಳು ಜರಗಲಿದೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಎಲ್ಲ ಮಾರುತಿ ಕಾರುಗಳ ಉಚಿತ ಸೇವಾ ಶಿಬಿರ, ಟ್ರೂವಾಲ್ಯು ವಿಭಾಗದಿಂದ ಯಾವುದೇ ಹಳೇ ಕಾರುಗಳ ಉಚಿತ ಮೌಲ್ಯಮಾಪನ, ಮಾರುತಿ ಸಹಯೋಗದ ಹಣಕಾಸು ಸಂಸ್ಥೆಗಳಿಂದ ಸ್ಥಳದಲ್ಲೇ ಹಣಕಾಸು ಸೌಲಭ್ಯ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಂಡೋವಿ ಮೋಟಾರ್ಸ್‌ನ ಆಡಳಿತ ವರ್ಗ ಮನವಿ ಮಾಡಿದೆ.