×
Ad

ಸಾಧಕರಿಗೆ ‘ಚೈತನ್ಯಶ್ರೀ’ ಪ್ರಶಸ್ತಿ ಪ್ರದಾನ

Update: 2016-08-28 00:19 IST

ಉಡುಪಿ, ಆ.27: ಇಂದಿನ ಟಿವಿ ಮಾಧ್ಯಮ, ಮೊಬೈಲ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ತಮ ಸಾಹಿತ್ಯದ ಅಗತ್ಯವಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಮಂಗಳೂರು ಕಥಾಬಿಂದು ಪ್ರಕಾಶನದ 9ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರಿಗೆ ‘ಚೈತನ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದರು. ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಪಿ.ವಿ.ಪ್ರದೀಪ್ ಕುಮಾರ್‌ರ 50ನೆ ಕಾದಂಬರಿ ‘ಬದುಕುಳಿದವರು’ನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಜಯಶಂಕರ್ ಬಾಸ್ರೀತ್ತಾಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಮುಂಬೈಯ ಡಾ.ಪಿ.ಕೆ.ಶೆಟ್ಟಿಗೆ ಗೌರವ ಸನ್ಮಾನ, ಸತೀಶ್ ಬಂಗೇರ, ಸುಂದರ್ ಶೆಟ್ಟಿ, ಗೋವರ್ಧನ್ ಕೆ.ಪಿ., ಹರೀಶ್ ಕುಮಾರ್, ಭದ್ರಾವತಿ ರಾಮಾಚಾರಿ, ಶ್ರೀನಾಥ್ ಭಾರಧ್ವಾಜ್, ಕೃಷ್ಣ ಮಾಸ್ಟರ್, ರಘುನಾಥ ಸೇರಿ ಗಾರ್, ಲಕ್ಷ್ಮೀಶ ಭಟ್, ಪ್ರಸನ್ನ ಭಟ್, ಮಾಧವ ರಾವ್, ಇಂದಿರಾ ಕೃಷ್ಣ, ಶಾರದಾ ಅಂಚನ್ ಅವರಿಗೆ ‘ಚೈತನ್ಯಶ್ರೀ ಪ್ರಶಸ್ತಿ’, ಪಂಚಮಿ ಮಾರೂರು, ಶ್ರೇಯಾದಾಸ್, ಪೂರ್ವಿ ರಾವ್, ರೆಮೋನಾ ಇವೆಟ್ ಪಿರೇರಾ ಅವರಿಗೆ ‘ಚೈತನ್ಯಶ್ರೀ ಪ್ರತಿಭಾ ಪುರಸ್ಕಾರ’ ಮತ್ತು ಧನುಷ್ ಗೌಡ, ಮೇಘನಾ, ಸೌಂದರ್ಯ, ತ್ರೀಹಲಿ ಹರೀಶ್ ಅವರಿಗೆ ‘ಚೈತನ್ಯಶ್ರೀ ಯುವ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಚಿದಾನಂದ ಕಾಮತ್, ಶ್ರೀಪತಿ ಭಟ್, ಎಂ.ಎಲ್.ಸಾಮಗ, ಎಂ.ಜೆ.ರಾವ್ ಉಪಸ್ಥಿತರಿದ್ದರು. ಪಿ.ವಿ.ಪ್ರದೀಪ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುನ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News