ಸಿಂಧು, ಸಾಕ್ಷಿ, ದೀಪಾ,ಗೋಪಿಚಂದ್ ಗೆ ಬಿಎಂಡಬ್ಲ್ಯೂ ಕಾರು ಉಡುಗೊರೆ

Update: 2016-08-28 13:52 GMT

ಹೈದರಾಬಾದ್ , ಆ.28 : ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧು, ಕಂಚು ಪಡೆದ ಕುಸ್ತಿಪಟು  ಸಾಕ್ಷಿ ಮಲಿಕ್ ಹಾಗೂ ಜಿಮ್ನಾಸ್ಟಿಕ್ ನಲ್ಲಿ 4ನೇ ಸ್ಥಾನ ಪಡೆದು ಇತಿಹಾಸ ಬರೆದ  ದೀಪಾ ಕರ್ಮಾಕರ್ ಮತ್ತು ಸಿಂಧು ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ  ಉದ್ಯಮಿಯೊಬ್ಬರು ಬಿಎಂಡಬ್ಲ್ಯೂ ಕಾರು ಉಡುಗೊರೆಯಾಗಿ ನೀಡಿದ್ದಾರೆ.  
 ಕೋಚ್ ಪುಲ್ಲೇಲ ಗೋಪಿಚಂದ್ ಅವರ ಹೈದರಾಬಾದ್ ನಲ್ಲಿರುವ  ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ನಡೆದ ಸಮಾರಂಭದಲ್ಲಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಕೋಚ್ ಗೋಪಿಚಂದ್ ಗೆ ಕ್ರಿಕೆಟ್ ಐಕಾನ್ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಬಿಎಂಡಬ್ಲ್ಯೂ ಕಾರನ್ನು ಹಸ್ತಾಂತಸಿದರು.
ಉದ್ಯಮಿ ಹಾಗೂ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವ ಕ್ರೀಡಾಪಟುಗಳಿಗೆ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News