×
Ad

ಕಾಶ್ಮೀರ: 50ದಿನ, 6400ಕೋಟಿ ರೂ.ನಷ್ಟ!

Update: 2016-08-28 12:04 IST

ಶ್ರೀನಗರ,ಆಗಸ್ಟ್ 28: ಸಂಘರ್ಷಭರಿತ ಕಳೆದ ಐವತ್ತು ದಿನಗಳಲ್ಲಿ ಕಾಶ್ಮೀರದಲ್ಲಿ 6400 ಕೋಟಿ ರೂಪಾಯಿ ಆರ್ಥಿಕ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.ಕರ್ಫ್ಯೂ, ಪ್ರತಿಭಟನೆ,ನಿಷೇಧಾಜ್ಞೆ ಇತ್ಯಾದಿಗಳಿಂದ ಜನಜೀವನ ಸ್ತಂಭಿಸಿದ ಹಿನ್ನೆಲೆಯಲ್ಲಿ ಆರ್ಥಿಕತೆಗೂ ಭಾರೀ ಪ್ರಮಾಣದ ಹಾನಿಯಾಗಿದೆ. ಕಾಶ್ಮೀರದ ಮುಖ್ಯ ಆದಾಯವಾದ ಪ್ರವಾಸೋದ್ಯಮ ಗಲಭೆಯಿಂದಾಗಿ ಕಳೆದ ಐವತ್ತು ದಿವಸಗಳಿಂದ ಸ್ಥಗಿತಗೊಂಡಿದ್ದು, ಅಂಗಡಿಗಳು ವ್ಯಾಪಾರಸಂಸ್ಥೆಗಳು ಪೆಟ್ರೋಲ್‌ಬಂಕ್‌ಗಳು ಮುಚ್ಚಿಕೊಂಡಿದೆ.

ಪ್ರತ್ಯೇಕತಾವಾದಿಗಳು ಹೋರಾಟಕ್ಕೆ ರಾತ್ರಿಯಲ್ಲಿ ಮಾತ್ರ ರಿಯಾಯತಿ ನೀಡುತ್ತಿದ್ದಾರೆ. ಇದರ ಪ್ರಯೋಜನ ವ್ಯಾಪಾರಿಗಳಿಗೆ ದೊರಕುವುದಿಲ್ಲ. ತೆರೆಯುವ ಅಂಗಡಿಗಳನ್ನು ಪ್ರತಿಭಟನಾಕಾರರು ಮುಚ್ಚಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಸುತ್ತಿವೆ. ಭದ್ರತಾಪಡೆಗಳು ಕೂಡಾ ಅಂಗಡಿಗಳನ್ನು ಮುಚ್ಚಿಸುತ್ತಿವೆ. ಸಂಘರ್ಷಸ್ಥಿತಿಯಿಂದ ತೆರಿಗೆ ಸಂಗ್ರಹಕ್ಕೂ ಅಡ್ಡಿಯಾಗಿದ್ದು ಸರಕಾರಕ್ಕೂ ಇದರಿಂದಾಗಿ ಭಾರೀ ನಷ್ಟವಾಗಿದೆ. ಸರಕಾರಕ್ಕೆ ಒಂದೂವರೆ ತಿಂಗಳಲ್ಲಿ 300 ಕೋಟಿ ರೂಪಾಯಿಯ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಹೊಟೇಲ್‌ಗಳು ಮತ್ತು ಹೌಸ್‌ಬೋಟ್‌ಗಳು ಕೂಡಾಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News