ನೈಜೀರಿಯದಲ್ಲಿ ಈ ವರ್ಷ49,000 ಮಕ್ಕಳು ಸಾಯುವ ಭೀತಿ: ಯುನಿಸೆಫ್

Update: 2016-08-28 08:44 GMT

 ನ್ಯೂಯಾರ್ಕ್,ಆಗಸ್ಟ್ 28: ಕಠಿಣ ಹಸಿವು ಮತ್ತು ಆಂತರಿಕ ಸಂಘರ್ಷದಿಂದಾಗಿ ನೈಜೀರಿಯದಲ್ಲಿ ಈ ವರ್ಷ49,000 ಮಕ್ಕಳು ಮರಣವಪ್ಪುವ ಸಾಧ್ಯತೆಯಿದೆ ಎಂದು ಯುನಿಸೆಫ್ ಹೇಳಿದೆ. ನೆರವಿಗಾಗಿ ಮಾನವಹಕ್ಕುಗಳ ಸಂಘಟನೆಗಳು ಮತ್ತು ಇತರರು ಅಲ್ಲಿಗೆ ಧಾವಿಸುವುದು ಅನಿವಾರ್ಯವಾಗಿದೆ ಎಂದು ಯುನಿಸೆಫ್ ತಿಳಿಸಿರುವುದಾಗಿ ವರದಿಯಾಗಿದೆ.

ನೈಜೀರಿ, ಛಾಡ್, ನೈಜರ್, ಕ್ಯಾಮರೂನ್ ಮುಂತಾದ ದೇಶಗಳು ಪೋಷಕಾಹಾರದ ಕೊರತೆಯನ್ನು ಎದುರಿಸುತ್ತಿದ್ದು, ಇಲ್ಲಿನ ಅಗತ್ಯವಿರುವ ನೆರವಿನಲ್ಲಿ ಶೇ.13ರಷ್ಟನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಹೆಚ್ಚಿನ ಸಹಾಯ ಬರದಿದ್ದರೆ ಚಿಕಿತ್ಸೆ ಇತ್ಯಾದಿ ನೆರವು ನೀಡಲು ಕಷ್ಟವಾಗಬಹುದು ಎಂದು ವಿಶ್ವಸಂಸ್ಥೆಯ ಏಜೆನ್ಸಿಯಾದ ಯುನಿಸೆಫ್ ತಿಳಿಸಿದೆ.ಬೊಕೊ ಹರಾಮ್ ಭಯೋತ್ಪಾದಕರ ಆಕ್ರಮಣವಿರುವ ಪ್ರದೇಶಗಳಲ್ಲಿ ಅತ್ಯಂತ ಸಂಕಷ್ಟದ ಪರಿಸ್ಥಿತಿ ತಲೆದೋರಿದೆ. ಇವರ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ನೈಜೀರಿಯನ್ ಸೇನೆ ಮರಳಿ ವಶಪಡಿಸಿಕೊಂಡ ನಂತರವೇ ಯುನಿಸೆಫ್ ಇವರಿಗೆ ಸಹಾಯವನ್ನು ತಲುಪಿಸಲು ಆರಂಭಿಸಿತ್ತು.

ಈ ಪ್ರದೇಶಗಳ ಆಸ್ಪತ್ರೆಗಳು, ಆರೋಗ್ಯ ಕ್ಲಿನಿಕ್‌ಗಳಲ್ಲಿ ಸಂಪೂರ್ಣ ಮತ್ತು ಅಂಶಿಕವಾಗಿ ನಾಶಪಡಿಸಿರುವ ಸ್ಥಿತಿಯಲ್ಲಿವೆ. 2009ರಲ್ಲಿ ಬೊಕೊಹರಾಂ ದಾಳಿನಡೆಸಲಾರಂಭಿಸಿದ ಬಳಿಕ ಅದು ಈವರೆಗೆ 15,000 ಮಂದಿಯನ್ನು ಕೊಂದಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News