×
Ad

ಉಡುಪಿಯ ಕಂಟ್ರಿ ಇನ್‌ ಹೋಟೆಲ್‌ಗೆ ಅಬಕಾರಿ ಅಧಿಕಾರಿಗಳ ದಾಳಿ ; ಅಕ್ರಮ ಮದ್ಯ ಮಾರಾಟ ಪತ್ತೆ

Update: 2016-08-28 16:13 IST

ಉಡುಪಿ, ಆ.28: ಉಡುಪಿಯ ಮಾಜಿ ಶಾಸಕ ರಘುಪತಿ ಭಟ್‌ ಅವರ ಮಾಲಕತ್ವದ ಕಟ್ಟಡದಲ್ಲಿರುವ ಕಂಟ್ರಿ ಇನ್‌ ಹೋಟೆಲ್‌ಗೆ ಅಬಕಾರಿ ಅಧಿಕಾರಿಗಳು ಶನಿವಾರ ರಾತ್ರಿ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಅಬಕಾರಿ ಅಧೀಕ್ಷಕ ಕೆ.ಎಸ್.ಮುರಳಿ ನಿರ್ದೇಶನದಲ್ಲಿ ಉಪಾಧೀಕ್ಷಕ ಕೆ.ವಿನೋದ್ ಕುಮಾರ್ ಅವರ ಮಾರ್ಗದರ್ಶಶನದಲ್ಲಿ ಅಬಕಾರಿ ನಿರೀಕ್ಷಕಿ ಜ್ಯೋತಿ ನೇತೃತ್ವದಲ್ಲಿ ದಾಳಿ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News