ಎಸ್‌ಡಿಪಿಐ ವತಿಯಿಂದ ಸೂಚನಾಫಲಕಗಳ ಕೊಡುಗೆ
Update: 2016-08-28 20:30 IST
ಬೆಳ್ತಂಗಡಿ, ಆ.28: ರಸ್ತೆಗಳಲ್ಲಿ ವಾಹನಗಳ ಹೆಚ್ಚಳದಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಡಿಪಿಐ ವತಿಯಿಂದ ಪುಂಜಾಲಕಟ್ಟೆ ಮಸೀದಿ ಬಳಿ, ಪುಂಜಾಲಕಟ್ಟೆ ಶಾಲೆಯ ಬಳಿ, ಮಡಂತ್ಯಾರು ಶಾಲೆಯ ಬಳಿ ಹಾಗೂ ಬಂಗೇರಕಟ್ಟೆ ಮದರಸದ ಬಳಿ ಗ್ರಾಮ ಪಂಚಾಯತ್‌ನ ಅನುಮತಿ ಮೇರೆಗೆ ಸೂಚನಾಫಲಕವನ್ನು ಅಳವಡಿಸಲಾಯಿತು.
ಸೂಚನಾಫಲಕದ ಉದ್ಘಾಟನೆಯನ್ನು ಬದ್ರಿಯಾ ಜುಮ್ಮಾ ಮಸೀದಿ ಪುಂಜಾಲಕಟ್ಟೆಯ ಅಧ್ಯಕ್ಷ ಹಾಜಿ ಪಿ. ಯೂಸುಫ್ ಮೂರ್ಜೆ ನೆರವೇರಿಸಿದರು.
ಮಸೀದಿ ಗುರುಗಳಾದ ಅಶ್ರಫ್ ಫೈಝಿ, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಎಂ., ಎಸ್‌ಡಿಪಿಐ ವಲಯಾಧ್ಯಕ್ಷ ರಿಯಾಝ್ ಪುಂಜಾಲಕಟ್ಟೆ, ಯಂಗ್‌ಮೆನ್ಸ್ ಅಸೋಶಿಯೇಶನ್ ಪುಂಜಾಲಕಟ್ಟೆಯ ಅಧ್ಯಕ್ಷರಾದ ಸಾಜಿ ಹುಸೈನ್ ಉಪಸ್ಥಿತರಿದ್ದರು.