ಆಪ್ ಪಕ್ಷದಿಂದ ದೂರ ಸರಿದ ವಿಶಾಲ್ ದಡ್ಲಾನಿ
ಹೊಸದಿಲ್ಲಿ, ಆ.28: ಸಂಗೀತ ನಿರ್ದೇಶಕ ಹಾಗೂ ಆಮ್‌ಆದ್ಮಿ ಪಕ್ಷದ(ಎಎಪಿ) ಬೆಂಬಲಿಗ ವಿಶಾಲ್ ದಡ್ಲಾನಿ ರಾಜಕೀಯದಿಂದ ದೂರವಿರುವೆನೆಂದು ಹೇಳಿದ್ದಾರೆ. ಜೈನ ಸನ್ಯಾಸಿಯೊಬ್ಬರ ಕುರಿತಾದ ಅವರ ಟ್ವೀಟ್ ಪ್ರತಿಭಟನೆಯ ಉರಿಗಾಳಿ ಯೆಬ್ಬಿಸಿದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಜೈನ ಸನ್ಯಾಸಿ ತರುಣಸಾಗರರು ಹರ್ಯಾಣ ವಿಧಾನಸಭೆಯನ್ನು ದ್ದೇಶಿಸಿ ಭಾಷಣ ಮಾಡಿರು ವುದನ್ನು ದಡ್ಲಾನಿ ಶನಿವಾರ ಪ್ರಶ್ನಿಸಿದ್ದರು ಹಾಗೂ ಅವರು ದಿಗಂಬರರಾಗಿರುವ ಬಗ್ಗೆ ಅಪಹಾಸ್ಯ ಮಾಡಿದ್ದರು. ಬಳಿಕ ಟ್ವೀಟನ್ನು ಅಳಿಸಲಾಗಿತ್ತು.
ಶುಕ್ರವಾರ ಹರ್ಯಾಣ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ್ದ ತರುಣಸಾಗರ್‌ಜಿ, ರಾಜಕೀಯ, ಹೆಣ್ಣು ಭ್ರೂಣ ಹತ್ಯೆ, ಪಾಕಿಸ್ತಾನ ಇತ್ಯಾದಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಅವರು ಜೈನರ ದಿಗಂಬರ ಪಂಥಕ್ಕೆ ಸೇರಿದವರಾಗಿದ್ದಾರೆ.
ದಡ್ಲಾನಿಯವರ ಟ್ವೀಟ್ ಎಎಪಿ ನಾಯಕರಿಗೂ ಸರಿಕಂಡಿಲ್ಲ. ತಾನು ಕಳೆದ ವರ್ಷ ತರುಣ ಸಾಗರಜಿ ಮಹಾರಾಜ್‌ರನ್ನು ಭೇಟಿಯಾಗಿದ್ದೆ. ತಮ್ಮ ಕುಟುಂಬವು ಟಿವಿಯಲ್ಲಿ ಅವರ ಉಪನ್ಯಾಸಗಳನ್ನು ನಿಯತವಾಗಿ ಕೇಳುತ್ತಿರುತ್ತದೆ. ತಾವವರನ್ನು ಹಾಗೂ ಅವರ ಚಿಂತನೆಗಳನ್ನು ಬಹಳ ಗೌರವಿಸು ತ್ತೇವೆಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದಿಲ್ಲಿಯ ಹಿರಿಯ ಸಚಿವ ಸತ್ಯೇಂದರ್ ಜೈನ್, ದಡ್ಲಾನಿಯವರ ಪರವಾಗಿ ಜೈನ ಸಮುದಾಯದ ಕ್ಷಮೆ ಯಾಚಿಸಿದ್ದಾರೆ.