ಆಸ್ಪತ್ರೆಯ ಹೊರಗೆ ಇರೋಮ್ ಬದುಕು ಆರಂಭ
ಇಂಫಾಲ, ಆ.28: ಮೂಗಿನಲ್ಲಿ ಆಹಾರ ಕೊಳವೆಯನ್ನು ಅಳವಡಿಸಿಕೊಂಡು ಜೀವನದ 16 ವರ್ಷಗಳನ್ನು ಆಸ್ಪತ್ರೆಯ ಮಂಚವೊಂದರ ಮೇಲೆ ಕಳೆದಿದ್ದ ಇರೋಮ್ ಚಾನು ಶರ್ಮಿಳಾ ಶನಿವಾರ ಆಸ್ಪತ್ರೆಯ ಹೊರಗಿನ ತನ್ನ ಜೀವನದ ಮೊದಲ ಹೆಜ್ಜೆಯಿರಿಸಿದ್ದಾಳೆ.
ಸಶಸ್ತ್ರ ಪಡೆಗಳ ವಿಶೇಷಾ ಧಿಕಾರ ಕಾಯ್ದೆಯ (ಆಫ್‌ಸ್ಪಾ) ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುತ್ತೇನೆಂದು ಅವರು ಹೇಳಿದ್ದಾರೆ. ಶರ್ಮಿಳಾ ಈಗ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಜಾಸತ್ತಾತ್ಮಕ ಮಾರ್ಗದಿಂದ ಕಾಯ್ದೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.ರಂದು ಹನಿ ಜೇನು ಸೇವಿಸುವ ಮೂಲಕ ತನ್ನ ಸುದೀರ್ಘ ಉಪವಾಸ ಮುಷ್ಕರಕ್ಕೆ ಶರ್ಮಿಳಾ ಅಂತ್ಯ ಹಾಡಿದಾಗ ಪರ-ವಿರೋಧ ಧ್ವನಿಗಳು ಕೇಳಿ ಬಂದಿದ್ದವು.ವರೀಗ, ಲಾಂಗೋಲ್ ಪರ್ವತ ಶ್ರೇಣಿಯ ತಪ್ಪಲಿನ ಪ್ರಕೃತಿ ಚಿಕಿತ್ಸಾ ಕೇಂದ್ರವೊಂದರಲ್ಲಿದ್ದಾರೆ. 16 ವರ್ಷಗಳಿಂದ ಶರ್ಮಿಳಾರ ಜೀರ್ಣಾಂಗ ವ್ಯೆಹ ಜಡವಾಗಿದ್ದುದರಿಂದಾಗಿ ವೈದ್ಯರೀಗ ಅವರ ಪಥ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ಶರ್ಮಿಳಾರನ್ನು ಆಸ್ಪತ್ರೆಯ ಅಧಿಕಾರಿಗಳು ಇಂದು ಮುಂಜಾನೆ ಅಧಿಕೃತವಾಗಿ ಬಿಡುಗಡೆ ಗೊಳಿಸಿದ್ದಾರೆ. ಆದರೆ, ಅವರೆಷ್ಟು ದಿನ ಅಲ್ಲಿ ಉಳಿದುಕೊಳ್ಳುತ್ತಾರೋ ತಮಗೆ ಗೊತ್ತಿಲ್ಲವೆಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಶರ್ಮಿಳಾರ ಬೆಂಬಲಿಗರು ಅವರಿಗಾಗಿ ಮತದಾರರ ಗುರುತು ಚೀಟಿ, ಆಧಾರ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಜನವರಿಯೊಳಗೆ ಅವುಗಳನ್ನು ಒದಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆಂದು ಸ್ನೇಹಿತರು ಹೇಳಿದ್ದಾರೆ.