×
Ad

ಉಳ್ಳಾಲ: ಸರೋಜ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಶುಭಾರಂಭ

Update: 2016-08-28 23:34 IST

ಉಳ್ಳಾಲ, ಆ.28: ಸಮಾಜ ಮುಂದುವರಿದಂತೆ ಇಂದು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಕಾಣಲು ಸಾಧ್ಯವಾಗಿದೆ. ಸುಸಜ್ಜಿತ ಸೌಲ್ಯಗಳುಳ್ಳ ಆಸ್ಪತ್ರೆಗಳು ನಿರ್ಮಾಣವಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಜನರಿಗೆ ವಿಶ್ವಾಸ ಬರುವ ರೀತಿಯಲ್ಲಿ ಪ್ರಾಮಾಣಿಕವಾಗಿ ಸೇವೆಯನ್ನು ನೀಡಿದರೆ ಉತ್ತಮ ಹೆಸರಿನೊಂದಿಗೆ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯ ಹಾಗೂ ಆಸ್ಪತ್ರೆಯೂ ಬೆಳೆಯಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

ಅವರು ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್ ಸಮೀಪ ಸ್ಥಾಪಿಸಲಾಗಿರುವ ಅತ್ಯಾಧುನಿಕ ವೈದ್ಯಕೀಯ ಸೌಲ್ಯಗಳನ್ನು ಹೊಂದಿರುವ ‘ಸರೋಜ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ’ಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಧರ್ಮ ಪ್ರಾಂತದ ಬಿಷಪ್ ವಂದನೀಯ ಡಾ.ಅಲೋಷಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನೀಡಿ, ಎಲ್ಲಾ ರೋಗಿಗಳಿಗೆ ಪ್ರೀತಿಯಿಂದ, ಗೌರವದಿಂದ ನೋಡಿಕೊಂಡಾಗ ನಾವು ನಡೆಸುವ ಸಂಸ್ಥೆಗೆ ಹೆಸರು ಬರಲು ಸಾಧ್ಯ. ವಿದೇಶದಲ್ಲಿ ಭಾರತೀಯ ವೈದ್ಯರಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ಅಲ್ಲಿನ ರೋಗಿಗಳಿಗೆ ಭಾರತೀಯ ವೈದ್ಯರು ನೀಡುವ ಗೌರವ, ಅವರನ್ನು ಮಾತನಾಡಿಸುವ ಶೈಲಿಯೇ ಅದಕ್ಕೆ ಕಾರಣ. ಇಲ್ಲಿನ ಆಸ್ಪತ್ರೆಯಲ್ಲಿ ದುರ್ಬಲ ವರ್ಗದ ರೋಗಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ದೇವರ ಆಶೀರ್ವಾದ ಸದಾ ಇದೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಾತನಾಡಿ, ನಾವು ನೆಮ್ಮದಿಯುತ ಜೀವನವನ್ನು ನಡೆಸಬೇಕಾದರೆ ಪ್ರಥಮವಾಗಿ ನಮಗೆ ಆರೋಗ್ಯ ಬಹಳ ಅಗತ್ಯವಾಗಿದೆ. ಇಂದು ಆರೋಗ್ಯ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿದ್ದು ಅತ್ಯಾಧುನಿಕ ಸೌಲ್ಯಗಳುಳ್ಳ ಆಸ್ಪತ್ರೆಗಳು ಜನರ ಸೇವೆಯನ್ನು ಮಾಡುತ್ತಿದೆ. ಉಳ್ಳಾಲದಲ್ಲಿ ಆರಂವಾದ ಸುಸಜ್ಜಿತ ಆಸ್ಪತ್ರೆಯೂ ಕೂಡಾ ಸಮಾಜಪರ ಸೇವೆಯೊಂದಿಗೆ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಆಡಳಿತ ಪಾಲುದಾರ ಡಾ.ಗಜಾನನ ಪ್ರಭು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ , ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮುಖ್ಯ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಾಜೇಶ್ವರಿ ದೇವಿ, ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಚಿಕಿತ್ಸಾ ವಿಬಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಆಚಾರ್ಯ , ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ , ಯುಎಇ ಕನ್ನಡ ಸಂಘ ದುಬಾ ಇದರ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಉಳ್ಳಾಲ ನಗರ ಸಭೆಯ ಅಧ್ಯಕ್ಷ ಹುಸೈನ್ ಕುಂಞ ಮೋನು, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಆಸ್ಪತ್ರೆಯ ಪಾಲುದಾರ ವೈದ್ಯ ಎನ್.ಜೆ. ಪ್ರಭು, ಕುಮುದಿನಿ ಕಿಣಿ, ಶ್ರೀನಿವಾಸ್ ಕಿಣಿ , ನಾಗೇಂದ್ರ ಮಲ್ಯ, ದೀಪಾ ಮಲ್ಯ ಉಪಸ್ಥಿತರಿದ್ದರು. ಈ ಸಂದಭರ್ದಲ್ಲಿ ಚಿತ್ರ ಕಲಾವಿದ ರವಿ ಎಂ. ಆರ್. ವಾಗ್ಲೆ ಚಿತ್ರ ರಚಿಸಿ ಡಾ.ಗಜಾನನ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರವಿ ಅವರನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಆಡಳಿತ ಪಾಲುದಾರ ಡಾ.ಗಜಾನನ ಪ್ರಭು ಸ್ವಾಗತಿಸಿದರು. ಮನೋಹರ್ ಪ್ರಸಾದ್ ಮತ್ತು ನಿಸರ್ಗ ಪಬ್ಲಿಸಿಟಿ ಮುಖ್ಯಸ್ಥ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಮುಖ್ಯ ಸಮನ್ವಯ ಅಧಿಕಾರಿ ಸುಧಾಕರ್ ಕುದ್ರೋಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News