×
Ad

ಉಡುಪಿ: ಪಲ್ಸ್ ಪೋಲಿಯೊ ವಿಚಾರ ಸಂಕಿರಣ, ‘ಸಮೃದ್ಧಿ’ಉದ್ಘಾಟನೆ

Update: 2016-08-28 23:59 IST

ಉಡುಪಿ, ಆ.28: ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182ರ ವತಿಯಿಂದ ವಲಯ ನಾಲ್ಕರ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಸಮೃದ್ಧಿ’ ಸದಸ್ಯತ್ವ ಅಭಿವೃದ್ಧಿ ಹಾಗೂ ಪಲ್ಸ್ ಪೋಲಿಯೊ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ರೋಟರಿ ಮಾಜಿ ಗವರ್ನರ್ ಉಲ್ಲಾಸ್ ವಿಶ್ವನಾಥ ಕೊಲಾತ್ಕರ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗವರ್ನರ್ ಡಿ.ಎಸ್.ರವಿ ಮಾತನಾಡಿ, ಈ ವರ್ಷ ಕನಿಷ್ಠ 600 ಪುರುಷರು ಮತ್ತು 400 ಮಹಿಳೆಯರು ಒಟ್ಟು 1,000 ಮಂದಿಯನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಪೌರ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಸದಸ್ಯತ್ವ ಸಂಯೋಜಕ ಮಂಜುನಾಥ ಶೆಟ್ಟಿ, ಸದಸ್ಯತ್ವ ಅಭಿವೃದ್ಧಿ ಸಮಿತಿ ಸಭಾಪತಿ ದಿನೇಶ್ ಹೆಗ್ಡೆ ಆತ್ರಾಡಿ, ಪೋಲಿಯೊ ರಾಷ್ಟ್ರೀಯ ಸಮಿತಿಯ ಪಿ.ನಾರಾಯಣ್ ಭಾಗವಹಿಸಿದ್ದರು.

ತರಬೇತುದಾರ ಕೆ.ನಾಗೇಂದ್ರ, ಪಲ್ಸ್ ಪೋಲಿಯೊ ಸಭಾಪತಿ ಡಾ.ಜಿ.ಸಿ.ಶರತ್, ಜಿಲ್ಲಾ ಕಣ್ಗಾವಲು ಅಕಾರಿ ಡಾ.ವಾಸುದೇವ, ಮುಂದಿನ ವರ್ಷದ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್, 2018ರ ಸಾಲಿನ ಗವರ್ನರ್ ಅಭಿನಂದನ್ ಶೆಟ್ಟಿ, ಎಕ್ಸ್‌ಟೆನ್ಸನ್ ಸಭಾಪತಿ ಡಿ.ಎಂ.ಜಲೇಂದ್ರ, ವೆಬ್‌ಸೈಟ್ ಸಮಿತಿ ಸಭಾಪತಿ ಪಣಿಕುಮಾರ್, ಮಹಿಳಾ ಸದಸ್ಯತ್ವ ಸಭಾಪತಿ ಭಾರತೀ ಚಂದ್ರಶೇಖರ್, ಧನರಾಜ್, ಐ.ಕೆ.ಜಯಚಂದ್ರ, ಸುಧಾಕರ ಹೆಗ್ಡೆ, ಬಾಲಕೃಷ್ಣ ಮಡ್ಡೋಡಿ, ದಿನೇಶ್ ಬಿ., ವಿವೇಕ್ ಪುಣ್ಯ ಮೂರ್ತಿ, ಜಯರಾಂ ಉಪಸ್ಥಿತರಿದ್ದರು. ಜಿಲ್ಲಾ ಸಮಾವೇಶ ಸಭಾಪತಿ ಜೈ ವಿಠಲ್ ಸ್ವಾಗತಿಸಿದರು. ವಲಯ 4ರ ಸಹಾಯಕ ಗವರ್ನರ್ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ವಂದಿಸಿದರು. ಜಿಲ್ಲಾ ಶುಭಾಶಯ ಸಮಿತಿ ಸಭಾಪತಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News