ಮಹಿಳಾ ಉದ್ಯಮಿಗಳಿಗೆ ಇಂದು ಮಾಹಿತಿ ಕಾರ್ಯಕ್ರಮ
Update: 2016-08-29 00:03 IST
ಮಂಗಳೂರು, ಆ.28: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮತ್ತು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಆಶ್ರಯದಲ್ಲಿ ಆ.29ರಂದು ಅಪರಾಹ್ನ 2ಕ್ಕೆ ‘ಮಹಿಳಾ ಉದ್ಯಮಿಗಳಿಗೆ ಕೈಗಾರಿಕಾ ಸ್ಥಾಪನೆಗೆ ಸಹಾಯಧನ ಹಾಗೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗಿರುವ ಇತರ ಸವಲತ್ತು ಹಾಗೂ ರಿಯಾಯಿತಿಗಳು’ ಎಂಬ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯೆಯ್ಯೆಡಿಯಲ್ಲಿರುವ ಸಂಘದ ಸಭಾಂಗಣದಲ್ಲಿ ನಡೆಯುವ ಕಾರ್ಯ ಕ್ರಮವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಅರುಣ್ ಪಡಿಯಾರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.