ಮಹಿಳೆಯ ಚಿನ್ನದ ಸರ ಕಳ್ಳತನ
Update: 2016-08-29 00:06 IST
ಉಪ್ಪಿನಂಗಡಿ, ಆ.28: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಎರಡು ಪವನ್‌ನ ಚಿನ್ನದ ಸರವನ್ನು ಕಳವುಗೈದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುತ್ತಾರ್ ನಿವಾಸಿಯಾಗಿರುವ ರೇಖಾ ಎಂಬವರು ಮಕ್ಕಳ ಚಿಕಿತ್ಸೆಗೆಂದು ಉಪ್ಪಿನಂಗಡಿಯ ಧನ್ವಂತರಿ ಆಸ್ಪತ್ರೆಗೆಂದು ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಕಳ್ಳರು ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಅವರ ಕತ್ತಿನಲ್ಲಿದ್ದ ಸರವನ್ನು ಕಳವುಗೈದಿದ್ದಾರೆ. ವಿಚಾರ ತಿಳಿದ ಸಾರ್ವಜನಿಕರು ಸರಗಳ್ಳರ ಪತ್ತೆಗೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರದಿಯಾಗಿದೆ.