ಮ್ಯಾಟ್‌ಶಾಪ್‌ನಲ್ಲಿ ಮಾನ್ಸೂನ್ ಸೇಲ್

Update: 2016-08-28 18:40 GMT

ಮಂಗಳೂರು, ಆ.28: ನಗರದ ಗೋಲ್ಡ್ ಫಿಂಚ್ ಹೊಟೇಲ್ ಕಾಂಪ್ಲೆಕ್ಸ್‌ನಲ್ಲಿರುವ ಮ್ಯಾಟ್‌ಶಾಪ್‌ನಲ್ಲಿ ನಡೆಯುತ್ತಿರುವ ಮಾನ್ಸೂನ್ ಸ್ಪೆಷಲ್ ಡಿಸ್ಕೌಂಟ್ ಸೇಲ್ ಇನ್ನು ಕೊನೆಯ 3ದಿನಗಳವರೆಗೆ ಮಾತ್ರ ಲಭ್ಯ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಆ.17ರಿಂದ ಆರಂಭಗೊಂಡಿರುವ ಈ ವಿಶೇಷ ಮಾರಾಟದಲ್ಲಿ ಆಯ್ದ ಮ್ಯಾಟ್‌ಗಳಿಗೆ ಶೇ.30ರವರೆಗೆ ರಿಯಾಯಿತಿ ಮತ್ತು ಎಲ್ಲ ರೀತಿಯ ಕಾರ್ಪೆಟ್‌ಗಳ ಮೇಲೆ ಶೇ.25ರವರೆಗೆ ರಿಯಾಯಿತಿ ಲಭ್ಯವಿದೆ. ಫ್ಲೋರಿಂಗ್ ಮತ್ತು ವಾಲ್ ಪೇಪರ್ ಬುಕ್ಕಿಂಗ್ ಮಾಡಿದವರಿಗೆ ಉಚಿತವಾಗಿ ಅಳವಡಿಸಿಕೊಡಲಾಗುವುದು. ಡೋರ್‌ಮ್ಯಾಟ್ಸ್, ಬಾತ್‌ಮ್ಯಾಟ್ಸ್, ಕಾರ್ಪೆಟ್ಸ್, ಫ್ಲೋರಿಂಗ್ ಹಾಗೂ ಪ್ಲೇಸ್‌ಮ್ಯಾಟ್, ಯೋಗಮ್ಯಾಟ್ಸ್, ಟೇಬಲ್‌ಮ್ಯಾಟ್ಸ್, ಟೇಬಲ್ ಕವರ್ಸ್‌, ಬಾತ್ ಟವಲ್ಸ್, ಶವರ್ ಮ್ಯಾಟ್ಸ್, ಆ್ಯಂಟಿ ಸ್ಲಿಪ್ ಮ್ಯಾಟ್ಸ್, ಆರ್ಟಿಫಿಶಿಯಲ್ ಗ್ರಾಸ್ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ.
 ಮೇಳದ ಅಂಗವಾಹಿ ನೆಲಕ್ಕೆ ಜೋಡಿಸುವ ಕಾರ್ಪೆಟ್‌ಗಳು, ವಿನಾಯ್ಲೆ ಫ್ಲೋರಿಂಗ್, ಪಿವಿಸಿ ಫ್ಲೋರೀಂಗ್, ವಾಲ್‌ಪೇಪರ್ ಮತ್ತು ಕಾರ್ಪೆಟಿಂಗ್‌ನ ಉಚಿತವಾಗಿ ಅಳವಡಿಸಿಕೊಡಲಾಗುವುದು. ಡ್ಯುರೋಟರ್ಫ್, ಟಾಪ್ ಫ್ಲೋರಿಂಗ್ ಮ್ಯಾಟ್ಝ್‌ವನ್, ಒಬ್ಸೆಶನ್, ಡ್ಯುರೊಸಾಫ್ಟ್ ಹಾಗೂ ಫ್ಲಾರಿಸ್ಟಾ ಕಂಪೆನಿಗಳ ಆಕರ್ಷಕ ಡೋರ್‌ಮ್ಯಾಟ್‌ಗಳ ಸಂಗ್ರಹ ಮತ್ತು ಜರ್ಮನಿಯ ಕ್ರೊನೊ ಕಂಪೆನಿಯ ವುಡನ್ ಫ್ಲೋರಿಂಗ್ ಕಂಫರ್ಟ್ ಲೈನ್ ಹಾಗೂ ಡೆಕೋರಿಯಾ ಕಂಪೆನಿಯ ಪಿವಿಸಿ ಫ್ರೊವಂಡರ್, ಫ್ಲೋರಿಂಗ್ ಕಂಪೆನಿಯ ವಿನಾಯ್ಲೋ ಫ್ಲೋರಿಂಗ್ ಅಂದಾಂತೆ, ಎಲಿಗೆನ್ಸ್ ಮುಂತಾದ ಬೆಲ್ಜಿಯಂ ದೇಶದ ಆಕರ್ಷಕ ವಾಲ್‌ಪೇಪರ್‌ಗಳ ಅಪೂರ್ವ ಸಂಗ್ರಹವೂ ಈ ಮಾನ್ಸೂನ್ ಸೇಲ್ ವಿಶೇಷತೆಯಾಗಿದೆ. ಶಾಗಿ ಕಾರ್ಪೆಟ್‌ಗಳು, ಹ್ಯಾಂಡ್ ಕಾರ್ವ್ ಕಾರ್ಪೆಟ್‌ಗಳು, ಸಿಲ್ಕ್ ಕಾರ್ಪೆಟ್‌ಗಳ ಅಪೂರ್ವ ಸಂಗ್ರಹವಿದ್ದು, ಮಳಿಗೆಯು ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ತೆರೆದಿರುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News