×
Ad

ಹಸಿಮೀನು ವ್ಯಾಪಾರಸ್ಥರ ಸಂಘದಿಂದ ಪ್ರಮೋದ್‌ಗೆ ಸನ್ಮಾನ

Update: 2016-08-29 00:12 IST

ಮಂಗಳೂರು, ಆ.28: ಮಂಗಳೂರು ಹಸಿಮೀನು ವ್ಯಾಪಾರಸ್ಥರ ಸಂಘದ ವತಿಯಿಂದ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್‌ರಿಗೆ ಅಭಿನಂದನಾ ಸಮಾರಂಭವು ಇಲ್ಲಿನ ಮೀನುಗಾರಿಕಾ ಬಂದರ್‌ನಲ್ಲಿ ನಡೆಯಿತು. ಸಮಾರಂಭವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು. ಮಂಗಳೂರು ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಟಿ.ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಎಂ.ಸುಲೈಮಾನ್ ಮತ್ತು ಟಿ.ಹಮೀದ್ ಅವರು ಸಚಿವ ಪ್ರಮೋದ್‌ರನ್ನು ಸನ್ಮಾನಿಸಿ ಬೆಳ್ಳಿಯ ಮೀನು ಸ್ಮರಣಿಕೆ ನೀಡಿದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಮತ್ಸ ಸಂಪತ್ತು ಮತ್ತು ಸಂತಾನವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದರು. ಈ ಸಂದರ್ಭ ಶಾಸಕ ಲೋಬೊ ಅವರನ್ನು ಸನ್ಮಾನಿಸಲಾಯಿತು.ಫಿಶರೀಶ್ ನಿರ್ದೇಶಕ ಮೋಹನ್ ಬಂಗೇರ, ನಿತಿನ್ ಕುಮಾರ್, ಎಂ.ಎಚ್.ಹುಸೈನ್, ಅಬ್ದುಲ್ಲತೀಫ್, ಉಮೇಶ್ ಕರ್ಕೇರ, ಕೆ.ಎಂ.ಅಶ್ರಫ್ ಉಪಸ್ಥಿತರಿದ್ದರು. ಹಸಿಮೀನು ವ್ಯಪಾರಸ್ಥರ ಸಂಘದ ಕಾರ್ಯದರ್ಶಿ ಅಬ್ದುಲ್ ಜಲೀಲ್ ಕೆ. ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಎಂ. ಕುಂಞಿಮೋನು ವಂದಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News