ಫೀಸು ಕೊಡದ 6ನೆ ತರಗತಿ ವಿದ್ಯಾರ್ಥಿಯನ್ನು ಥಳಿಸಿಕೊಂದ ಶಾಲೆಯವರು

Update: 2016-08-29 06:58 GMT

ಇಂಫಾಲ,ಆ.29: ಸಮಯಕ್ಕೆ ಸರಿಯಾಗಿ ಫೀಸು ಕೊಡದ ವಿದ್ಯಾರ್ಥಿಯೊಬ್ಬನನ್ನು ಶಾಲೆಯಲ್ಲಿ ಥಳಿಸಲಾಗಿದ್ದು, ಬಳಿಕ ಆತ ಮೃತನಾಗಿರುವ ಹೃದಯವಿದ್ರಾವಕ ಘಟನೆ ಇಂಫಾಲದಿಂದ ವರದಿಯಾಗಿದೆ. ಇಲ್ಲಿನ ಶಾಲೆಯೊಂದರ ಆರನೆ ತರಗತಿಯ ವಿದ್ಯಾರ್ಥಿಯನ್ನು ಕಟುಕ ಹೃದಯಿಗಳು ಅತಿದಾರುಣವಾಗಿ ಹೊಡೆದು ಕೊಂದಿದ್ದಾರೆ. ಶಾಲಾಡಳಿತ ಮಂಡಳಿಯ ವಿರುದ್ಧ ಬಾಲಕನ ಅಸಹಜ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಇಂಫಾಲದ ಲಾನ್‌ಗೋಲಿನ ಸಮೀಪದಲ್ಲಿರುವ ರೆಸಿಡೆನ್ಶಿಯಲ್ ಕಿಡ್ಸ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್,ಸ್ಕೂಲ್‌ಫೀಸು ಸರಿಯಾದ ಸಮಯಕ್ಕೆ ಕೊಡಬೇಕು.ಇಲ್ಲದಿದ್ದರೆ ಬಾಲಕನ ಎಡ್ಮಿಶನ್ ರದ್ದುಮಾಡಲಾಗುವುದು ಎಂದು ಶಾಲೆಯ ಅಧಿಕಾರಿಗಳು ತಮ್ಮೊಡನೆ ಹೇಳಿದ್ದರು ಎಂದು ಮೃತ ವಿದ್ಯಾರ್ಥಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಶುಕ್ರವಾರ ಫೀಸು ಪಾವತಿಸಲಿಲ್ಲ ಎಂದು ಶಾಲೆಯವರು ಬಾಲಕನನ್ನು ಮನೆಗೆ ಕರೆತಂದಿದ್ದರು. ನಂತರ ಬಾಲಕನ ದೇಹದಲ್ಲಿ ಹೊಡೆತದ ಕಲೆಗಳು ಕಂಡು ಬಂದಿದ್ದವು. ಬಾಲಕನನ್ನು ಕೇಳಿದಾಗ ಶಾಲೆಯಲ್ಲಿ ತನಗೆ ಹೊಡೆದಿದ್ದಾರೆ ಎಂದು ಹೇಳಿದ್ದ. ಸ್ವಲ್ಪಸಮಯದ ನಂತರ ಅವನು ಕುಸಿದುಬಿದ್ದಿದ್ದ. ಶನಿವಾರದಂದು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಆರೋಪಿಗಳನ್ನುಬಂಧಿಸುವವರೆಗೆ ಪುತ್ರನ ಪಾರ್ಥಿವಶರೀರವನ್ನು ಪಡೆಯುವುದಿಲ್ಲ ಎಂದು ತಂದೆ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News