ಕೇರಳ: ಮನೆಗೆ ನುಗ್ಗಿ ವಿದ್ಯಾರ್ಥಿನಿಗೆ ಹಲ್ಲೆ
Update: 2016-08-29 15:54 IST
ಕುರುಂಪಂಪಡಿ,ಆ.29: ಪ್ಲಸ್‌ಟು(ದ್ವಿತೀಯ ಪಿಯುಸಿ) ವಿದ್ಯಾರ್ಥಿನಿಯನ್ನು ಅವಳ ಮನೆಗೆ ನುಗ್ಗಿ ಐದು ಜನರ ತಂಡ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ವಿದ್ಯಾರ್ಥಿನಿಯ ತಲೆ ಮತ್ತು ಕೈಗಳಲ್ಲಿ ಬ್ಲೇಡ್‌ನಿಂದ ಗೀಚಿರುವ ಗಾಯಗಳಾಗಿವೆ. ಕೊಡನಾಡ್ ಪೊಲೀಸರು ವಿದ್ಯಾರ್ಥಿನಿಯನ್ನು ತಾಲೂಕಾಸ್ಪತ್ರೆಗೆ ಸೇರಿಸಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿದ್ಯಾರ್ಥಿನಿಯ ಬಂಧುಗಳು ಎರ್ನಾಕುಲಂನ ಮೇಡಿಕಲ್ ಟ್ರಸ್ಟ್‌ಆಸ್ಪತ್ರೆಗೆ ಸೇರಿಸಿದ್ದಾರೆಂದು ತಿಳಿದು ಬಂದಿದೆ. ತಂಡ ತನ್ನ ತಲೆಯನ್ನು ಗೋಡೆಗೆ ಬಡಿಯಿತು ಹಾಗೂ ಕೈಗಳಿಗೆ ಬ್ಲೇಡ್‌ನಿಂದ ಗೀಚಿ ಗಾಯಗೊಳಿಸಿತು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಮುಡಕ್ಕುಝ ಆನೆಕಲ್ಲು ಎಂಬಲ್ಲಿಗೆ ಸಮೀಪ ರವಿವಾರ ಸಂಜೆ ಆರು ಗಂಟೆಗೆ ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ನುಗ್ಗಿದ ತಂಡ ವಿದ್ಯಾರ್ಥಿನಿಯನ್ನು ಗಾಯಗೊಳಿಸಿದೆ ಎಂದು ವರದಿ ತಿಳಿಸಿದೆ.