ಆಮ್‌ಆದ್ಮಿ ಪಾರ್ಟಿಯಿಂದ ಕೋಟ್ಯಂತರ ರೂ.ಗೆ ಟಿಕೆಟ್ ಮಾರಾಟ: ಅಕಾಲಿದಳ ಆರೋಪ
ಚಂಡಿಗಡ,ಆ.29: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಮ್ ಆದ್ಮಿ ಪಾರ್ಟಿಯನ್ನು ಅಯೋಗ್ಯಗೊಳಿಸಬೇಕೆಂದು ಅಕಾಲಿದಳದ ಸಂಸದರು ಚುನಾವಣಾ ಆಯೋಗವನ್ನು ಕೋರಿದ್ದಾರೆಂದು ವರದಿಯಾಗಿದೆ. ಎರಡು ಲಕ್ಷ ರೂಪಾಯಿ ಪಡೆದಿರುವ ಆರೋಪದಲ್ಲಿ ಆಮ್‌ಆದ್ಮಿಪಾರ್ಟಿ ಹಣಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಮಾರುತ್ತಿರುವ ವಿಷಯ ಆಮ್ ಆದ್ಮಿ ಪಾರ್ಟಿ ಪಂಜಾಬ್ ಸಂಯೋಜಕ ಸ್ಥಾನದಿಂದ ಉಚ್ಚಾಟಿಸಿರುವ ಸುಚ್ಚಾ ಸಿಂಗ್ ಛೋಟೆಪುರ್ ಪ್ರಕರಣದಲ್ಲಿ ಬಹಿರಂಗಗೊಂಡಿದೆ ಎಂದು ಸಂಸದರು ಚುನಾವಣಾ ಆಯೋಗದ ಗಮನಸೆಳೆದಿದ್ದಾರೆ. ಆಪ್‌ನ ದೊಡ್ಡದೊಡ್ಡ ನಾಯಕರು ಕೋಟ್ಯಂತರ ರೂಪಾಯಿ ಪಡೆದು ಟಿಕೆಟನ್ನು ಮಾರುತ್ತಿದ್ದಾರೆ ಎಂದು ಚುನಾವಣಾಆಯೋಗಕ್ಕೆ ಲಿಖಿತ ದೂರು ನೀಡಲು ಅಕಾಲಿದಳ ಸಂಸದರು ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದೆ.
ಆಮ್ ಆದ್ಮಿನಾಯಕರು ಬಹಿರಂಗವಾಗಿ ಟಿಕೆಟ್ ಮಾರಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದು, ಆದ್ದರಿಂದ ಅದರ ಮಾನ್ಯತೆಯನ್ನು ರದ್ದುಪಡಿಸಬೇಕು. ಅದು ಪಂಜಾಬ್‌ನಲ್ಲಿ ಸ್ಪರ್ಧಿಸದಂತೆ ಅಯೋಗ್ಯಗೊಳಿಸಬೇಕು ಎಂದು ಲಿಖಿತ ದೂರು ನೀಡುವ ಮೂಲಕ ಸಂಸದರು ಆಗ್ರಹಿಸಲಿದ್ದಾರೆ.
ಆಯೋಗವನ್ನು ಆಗ್ರಹಿಸಲು ಅಕಾಲಿದಳದ ಸಂಸದರಾದ ಸುಖ್‌ದೇವ್ ಸಿಂಗ್ ದಿಂಡ್ಸಾ, ಬಲವಿಂದರ್ ಸಿಂಗ್ ಬೂಂದಡ್, ಹರ್‌ಸಿಮ್ರತ್ ಕೌರ್ ಬಾದಲ್, ಪ್ರೇಮ್ ಸಿಂಗ್ ಚಂದೂಮಾಜ್ರಾ, ನರೇಶ್ ಗುಜ್ರಾಲ್, ರಣಜಿತ್ ಸಿಂಗ್ ಬ್ರಹ್ಮಪುರ ಮತ್ತು ಶೇರ್ ಸಿಂಗ್ ಘುಬಾಯಾ ಆಯೋಗಕ್ಕೆ ಮುಂದೆ ಬಂದಿದ್ದು. ಆಮ್‌ಆದ್ಮಿಪಾರ್ಟಿಯ ಮಾಜಿಸಂಯೋಜಕ ಸುಚ್ಚಾ ಸಿಂಗ್‌ಛೋಠೇಪುರ್ ತನ್ನ ಪಕ್ಷದ ವಿರುದ್ಧ ಮಾಡಿರುವ ಆರೋಪದ ತನಿಖೆ ನಡೆಸಬೇಕೆಂದು ಸಂದರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಪಂಜಾಬ್‌ನಲ್ಲಿ ಆಮ್‌ಆದ್ಮಿ ತನ್ನ ಮುಗ್ಧ ಆಭ್ಯರ್ಥಿಗಳಿಂದ ಹಣ ಸುಲಿಗೆ ನಡೆಸುತ್ತಿದೆ ಎಂದು ಸಂಸದರು ಕಿಡಿಕಾರಿದ್ದಾರೆ.
ಸುಚ್ಚಾಸಿಂಗ್ ಛೋಟೆಪುರ್, ಆಮ್‌ಆದ್ಮಿ ಪಾರ್ಟಿ ಪ್ರತಿಯೊಂದು ಟಿಕೆಟ್‌ನ್ನು ಒಂದರಿಂದ ಎರಡು ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟ ಮಾಡುತ್ತಿದೆ ಎಂದು ಈ ಹಿಂದೆ ಆರೋಪಿಸಿದ್ದರು. ಮಾಜಿ ಭ್ರಷ್ಟ ಅಧಿಕಾರಿಗಳು, ಅಪರಾಧಿಗಳುಮತ್ತು ಶ್ರೀಮಂತರಿಗೆ ಟಿಕೆಟ್ ಹಂಚುವುದನ್ನು ವಿರೋಧಿಸಿದ್ದಕ್ಕಾಗಿ ಆಮ್ ಆದ್ಮಿಪಾರ್ಟಿ ಛೋಟೆಪುರ್‌ರನ್ನು ಮೂಲೆಗೀಡು ಮಾಡಿದೆ ಎಂದು ಅಕಾಲಿದಳ ಸಂಸದರು ಆರೋಪಿಸಿದ್ದಾರೆ.
ಆಮ್ ಆದ್ಮಿಯ ದಿಲ್ಲಿ ತಂಡ ಹಣ ಪಡೆದು ಟಿಕೆಟ್ ಹಂಚುತ್ತಿದೆ ಎಂದು ಹೇಳಿರುವ ಛೋಟೆಪುರ್ ಮತ್ತು ಹರ್ದಿಪ್ ಕಿಂಗ್ರಾ, ಜಸ್ಸಿಜಸ್‌ರಾಜ್ ಹಾಗೂ ಎನ್.ಆರ್.ಐ ಪವಿತ್ರ ಸಿಂಗ್‌ರ ಹೇಳಿಕೆಗಳನ್ನು ದಾಖಲಿಸಿ ತನಿಖೆ ನಡೆಸಬೇಕೆಂದು ಚುನಾವಣಾ ಆಯೋಗವನ್ನು ಅಕಾಲಿದಳ ಸಂಸದರ ತಂಡ ಆಗ್ರಹಿಸಿದೆ. ಈ ನಡುವೆ ಹರ್‌ಸಿಮ್ರತ್ ಕೌರ್ ದಿಲ್ಲಿಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಕ್ಖರ ಸಾಹೋದರ್ಯದ ನಡುವೆ ಹುಳಿ ಹಿಂಡುತ್ತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ ಎಂದು ವರದಿತಿಳಿಸಿದೆ.