×
Ad

2 ಗಂಟೆಯಲ್ಲಿ 200 ರೂಪಾಯಿ ಗಳಿಸಬಹುದು: ‘ಭಿಕ್ಷುಕನಾದ’ ಐಟಿ ಉದ್ಯೋಗಿಯೊಬ್ಬನ ವೀಡಿಯೊ!

Update: 2016-08-29 16:28 IST

ಕೆಲಸ ಇಲ್ಲವೆಂದು ಯಾರೂ ದುಃಖಿಸಿ ಕೂರಬೇಕಿಲ್ಲ.ಭಿಕ್ಷಾಟನೆಗೆ ಇಳಿದರೆ ನಿಮಗೆ ಲಕ್ಷಾಧೀಶರಾಗಬಹುದು. ತೃಶೂರಿನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಜೋಳಿಗೆಯಲ್ಲಿ ಲಕ್ಷಾಂತರ ರೂಪಾಯಿ ಇದ್ದುದು ಪತ್ತೆಯಾಗಿತ್ತು. ಇದರಲ್ಲಿ ಅತಿಶಯೋಕ್ತಿಯಿಲ್ಲ ಎಂದು ಐಟಿ ಉದ್ಯೋಗಿಯೊಬ್ಬ ಸಾಬೀತುಪಡಿಸಿದ್ದಾನೆ ಎಂದು ವರದಿಯಾಗಿದೆ. ಭಿಕ್ಷಾಟನೆಯನ್ನು ನಿಷೇಧಿಸಿದ್ದರೂ ಈ ಕ್ಷೇತ್ರದಲ್ಲಿ ಜನರು ಯಾಕೆ ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಆತನ ಅನುಭವ ಒಂದು ಪುರಾವೆ ಕೂಡಾ ಆಗಬಹುದು. ಭಾರತದಲ್ಲಿ ಭಿಕ್ಷಾಪಾತ್ರೆ ಹಿಡಿದರೆ ಸುಖವಾಗಿರಬಹುದು ಎಂದು ಆತ ಸಾಬೀತುಪಡಿಸಿದ್ದಾನೆ.

     ಒಬ್ಬ ಬಿಪಿಒ ಉದ್ಯೋಗಿ ಭಿಕ್ಷೆಯಿಂದ ದಿನವೊಂದಕ್ಕೆ ಎಷ್ಟು ಸಂಪಾದಿಸಬಹುದೆಂದು ಪರೀಕ್ಷಿಸಿ ನೋಡಲು ಭಿಕ್ಷಾಟನೆ ನಡೆಸಿದ ಕುರಿತು ವೀಡಿಯೊ ವೈರಲ್ ಆಗಿದ್ದು, ಭಿಕ್ಷುಕನ ವೇಷ ಧರಿಸಿ ಚಿಕ್ಕ ಕ್ಯಾಮರಾವೊಂದನ್ನು ವಸ್ತ್ರದಲ್ಲಿ ಇರಿಸಿ ಭಿಕ್ಷೆ ಬೇಡಿದ್ದು, ಈತ ಎರಡು ಗಂಟೆಯಲ್ಲಿ ಇನ್ನೂರು ರೂಪಾಯಿ ಸಂಪಾದಿಸಿದ್ದಾನೆ ಎನ್ನಲಾಗಿದೆ. ದಿನವೊಂದಕ್ಕೆ ಭಿಕ್ಷೆ ಬೇಡಿದರೆ ಸುಮಾರು ಒಂದು ಸಾವಿರ ರೂಪಾಯಿ ಗಳಿಸಲು ಸಾಧ್ಯವಿದೆಯೆಂದು ಆತ ಹೇಳಿಕೊಂಡಿದ್ದಾನೆ. ಈಗ ಆತ ಭಿಕ್ಷೆ ಬೇಡುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ.ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ಕಾರು ನಿಲ್ಲಿಸಿರುವಲ್ಲಿ, ಆಟೊಗಳ ಮುಂದೆ ಈತ ಭಿಕ್ಷೆ ಬೇಡುತ್ತಾನೆ. ಹೀಗೆ ಎರಡು ಗಂಟೆಯಲ್ಲಿ ಇನ್ನೂರು ರೂಪಾಯಿಯನ್ನು ಆತ ಸಂಪಾದಿಸಿದ್ದಾನೆ. ಈ ರೀತಿ ಆದರೆ ಒಬ್ಬ ಭಿಕ್ಷುಕನಿಗೆ ಒಂದು ತಿಂಗಳಲ್ಲಿ 30,000 ರೂಪಾಯಿ ಸಂಪಾದಿಸಲು ಸಾಧ್ಯವಿದೆಯಂತೆ. ಜನರ ಕರುಣೆಯನ್ನು ಶೋಷಣೆ ಮಾಡಲಾಗುತ್ತಿದೆ ಮತ್ತು ಭಿಕ್ಷಾಟನೆ ಮಾಫಿಯ ಸಕ್ರಿಯವಾಗಿದೆ ಎಂದು ಎಚ್ಚರಿಕೆ ನೀಡಿ ಒಂದುನಿಮಿಷ 37 ಸೆಕೆಂಡಿನ ವೀಡಿಯೊ ಕೊನೆಗೊಳ್ಳುತ್ತದೆ ಎಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News