×
Ad

ಹೆಬ್ರಿಯಲ್ಲಿ ನಕಲಿ ಗೋರಕ್ಷಕರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2016-08-29 23:31 IST

ಹೆಬ್ರಿ, ಆ.29: ನಕಲಿ ಗೋರಕ್ಷಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೆ ಉಡುಪಿ ಜಿಲ್ಲೆಯಲ್ಲಿ ಪಾಳೆಗಾರಿಕೆಯಿಂದ ಭಯದ ವಾತಾವರಣ ನಿರ್ಮಾಣವಾಗಿ ಬಿಜೆಪಿಯು ತನ್ನ ಹಿಂದೂ ಸಂಘಟನೆಗಳ ನಕಲಿ ಗೋರಕ್ಷಕರಿಂದ ಅಮಾಯಕ ಯುವಕರನ್ನು ಹಿಂದುತ್ವದ ಹೆಸರಿನಲ್ಲಿ ಬಲಿ ತೆಗೆದುಕೊಳ್ಳುತ್ತಿದೆ ಎಂದು ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ.

ಹೆಬ್ರಿ ಬಸ್ ನಿಲ್ದಾಣದ ಬಳಿ ಸೋಮವಾರ ಹೆಬ್ರಿ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವಕಾಂಗ್ರೆಸ್ ವತಿಯಿಂದ ನಕಲಿ ಗೋರಕ್ಷಕ ರಿಂದ ಕೊಲೆಯಾದ ಕೆಂಜೂರು ಪ್ರವೀಣ್ ಪೂಜಾರಿ ಹಂತಕರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮಕ್ಕಳನ್ನು ಇಂತಹ ಕೃತ್ಯಕ್ಕೆ ಬಳಸಿಕೊಳ್ಳುವ ಹಿಂದೂ ನಾಯಕರು ಈಗ ಎಲ್ಲಿದ್ದಾರೆ ಎಂದು ಗೋಪಾಲ ಭಂಡಾರಿ ಪ್ರಶ್ನಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಜಿಪಂನ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಮತ್ತಿತರರು ಮಾತನಾಡಿದರು.
 
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಭಂಡಾರಿ, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಎಚ್. ಜಯಕರ ಪೂಜಾರಿ, ತಾಲೂಕು ಯುವಕಾಂಗ್ರೆಸ್ ಅಧ್ಯಕ್ಷ ಸುಭೋದ್ ರಾವ್, ಗ್ರಾಪಂ ಸದಸ್ಯರು, ಪಕ್ಷದ ಮುಖಂಡರು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಳಾದ ನವೀನ್ ಕೆ. ಅಡ್ಯಂತಾಯ, ಸಂತೋಷ ಕುಮಾರ್ ಶೆಟ್ಟಿ, ಗ್ರಾಪಂ ಅಧ್ಯಕ್ಷರಾದ ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ, ಚಾರದ ಸಂದೀಪ್, ರೇಷ್ಮಾ, ಪಕ್ಷದ ವಿವಿಧ ಘಟಕದ ಪ್ರಮುಖರಾದ ಡಾ.ಸಂತೋಷ ಕುಮಾರ್ ಶೆಟ್ಟಿ, ಶೀನಾ ಪೂಜಾರಿ, ಸೀತಾನದಿ ರಮೇಶ ಹೆಗ್ಡೆ, ರಾಘವ ದೇವಾಡಿಗ, ಎಚ್. ಪ್ರವೀಣ್ ಬಲ್ಲಾಳ್, ವರಂಗ ಲಕ್ಷ್ಮಣ ಆಚಾರ್, ಮುನಿಯಾಲು ರವಿ ಪೂಜಾರಿ, ಅಣ್ಣಪ್ಪ ಕುಲಾಲ್, ಕರುಣಾಕರ ನಾಯ್ಕೆ ಮುಂತಾದವರು ಉಪಸ್ಥಿತರಿದ್ದರು.

ಹೆಬ್ರಿ ಬಂಟರ ಸಂಘದಿಂದ ಹೆಬ್ರಿ ಬಸ್‌ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಕಾರ್ಕಳ ವೃತ್ತ ನಿರೀಕ್ಷಕ ಜ್ವಾಯ್ ಆಂಟನಿ ಅವರ ಮೂಲಕ ಬಜರಂಗದಳ ಸಹಿತ ನಕಲಿ ಹಿಂದೂ ಸಂಘಟನೆಗಳನ್ನು ನಿಷೇಧಿಸುವಂತೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News