ರಮ್ಯಾ ವಿರುದ್ಧ ದುರ್ವರ್ತನೆಗೆ ಮಂಚ್ ಖಂಡನೆ
Update: 2016-08-29 23:56 IST
ಮಂಗಳೂರು, ಆ. 29: ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಮೇಲೆ ಮೊಟ್ಟೆ, ಟೊಮೊಟೊಗಳನ್ನು ಎಸೆದು ಅನಾಗರಿಕ ರೀತಿಯಲ್ಲಿ ವರ್ತಿಸಿದ ಘಟನೆಯನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.
ಮಹಿಳೆಯರಿಗೆ ವಿಶೇಷ ಗೌರವ ಕೊಡಬೇಕೆನ್ನುವ ಸಂಘಟನೆಗಳ ಕಾರ್ಯ ಕರ್ತರಿಂದಲೇ ಸ್ತ್ರೀಯರನ್ನು ಈ ರೀತಿ ಅವಮಾನಿಸುವ ಕೃತ್ಯ ನಡೆದಿರುವುದು ಯಾವ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಘದ ಮುಖಂಡರಾದ ಅಲಿ ಹಸನ್, ರೋಶನ್ ಪತ್ರಾವೊ, ವಸಂತ ಟೈಲರ್, ಮುಹಮ್ಮದ್ ಸಾಲಿ ಪ್ರಶ್ನಿಸಿದ್ದಾರೆ.