ಖತೀಬರು ಮತ್ತು ಮದ್ರಸ ಅಧ್ಯಾಪಕರ ಸ್ನೇಹ ಸಮ್ಮಿಲನ

Update: 2016-08-30 14:41 GMT

ಮಂಗಳೂರು, ಆ.30: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್‌ಗೆ ಒಳಪಟ್ಟ ಮಂಗಳೂರು, ಸುರತ್ಕಲ್, ಕಾಟಿಪಳ್ಳ, ಕನ್ನಂಗಾರ್, ಬಜ್ಪೆಮತ್ತು ಕೈಕಂಬ ರೇಂಜ್‌ಗಳ ಜಂಟಿ ಆಶ್ರಯದಲ್ಲಿ ಖತೀಬರು ಮತ್ತು ಮದ್ರಸ ಅಧ್ಯಾಪಕರ ಸ್ನೇಹ ಸಮ್ಮಿಲನವು ಸುರತ್ಕಲ್‌ನ ಲಯನ್ಸ್ ಕ್ಲಬ್‌ನಲ್ಲಿ ಇತ್ತೀಚೆಗೆ ಜರಗಿತು.

ಕಾರ್ಯಕ್ರಮವನ್ನು ಕೃಷ್ಣಾಪುರ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್‌ಉದ್ಘಾಟಿಸಿದರು. ಉಡುಪಿ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರು, ‘ಹುಖೂಕುಲ್ ಇಬಾದ್ ಇಸ್ಲಾಮಿನಲ್ಲಿ ಮನುಕುಲದ ಸೇವೆ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು.

ಸುನ್ನಿ ಎಜುಕೇಶನ್ ಡೆವಲೆಪ್‌ಮೆಂಟ್ ಕಮಿಟಿ ಆಫ್ ಕರ್ನಾಟಕದ ರಾಜ್ಯಾಧ್ಯಕ್ಷ ಕೆ.ಕೆ ಮೊಹಿಯುದ್ದೀನ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಿಸ್ಬಾಹ್ ನಾಲೇಜ್ ಫೌಂಡೇಶನ್‌ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಮೊಹಿಯುದ್ದೀನ್ ಜುಮಾ ಮಸೀದಿ ಸುರತ್ಕಲ್‌ನ ಅಧ್ಯಕ್ಷ ಯಾಕೂಬ್ ಇಡ್ಯಾ, ಮಸ್ಜಿದುನ್ನೂರು ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಕೃಷ್ಣಾಪುರ ಮಸೀದಿಯ ಮಾಜಿ ಕೋಶಾಧಿಕಾರಿ ಹುಸೈನ್, ಟ್ಯಾಲೆಂಟ್‌ನ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮತ್ತು ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ ಉಪಸ್ಥಿತರಿದ್ದರು.

ಸಂಸ್ಥೆಯ ಸಲಹೆಗಾರ ರಫೀಕ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಅಸ್ಪರ್ ಹುಸೈನ್ ಬೆಂಗರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News