×
Ad

ತಂತ್ರಜ್ಞಾನ ಅನ್ವೇಷಣೆಯು ಮಹಾಭಾರತ ಕಾಲದಲ್ಲೇ ಆರಂಭಗೊಂಡಿತ್ತು: ಸಚಿವ ಸಿನ್ಹಾ

Update: 2016-08-30 23:00 IST

ಹೊಸದಿಲ್ಲಿ, ಆ.30: ದೇಶೀಯ ತಂತ್ರಜ್ಞಾನ ಅಭಿವೃದ್ಧಿಗೆ ಇಂದಿಲ್ಲಿ ಒತ್ತು ನೀಡಿದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅವರು ಮಹಾಭಾರತವನ್ನು ಉಲ್ಲೇಖಿಸಿ, ಅಂಧ ಕೌರವ ದೊರೆ ಧೃತರಾಷ್ಟ್ರನು ಕುರುಕ್ಷೇತ್ರ ಯುದ್ಧದ ವಿವರಗಳನ್ನು ದಿವ್ಯದೃಷ್ಟಿ ಹೊಂದಿದ್ದ ಸಂಜಯನ ಮೂಲಕ ತಿಳಿಯಲು ಬಯಸಿದಾಗಲೇ ನಮ್ಮಲ್ಲಿ ಸಂಪರ್ಕ ಸಾಧನಗಳ ಅನ್ವೇಷಣೆ ಆರಂಭಗೊಂಡಿತ್ತು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಇಂದು ಈ ಹಂತವನ್ನು ತಲುಪಿದೆ ಎಂದು ಹೇಳಿದರು.

ಸಿ-ಡಾಟ್ ಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಭಾಷಣವನ್ನು ಮಾಡಿದ ಅವರು, ಆಮದು ತಂತ್ರಜ್ಞಾನವನ್ನು ನಂಬಿಕೊಂಡು ವಿಶ್ವ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ. ಇದಕ್ಕಾಗಿ ದೇಶದ ಜನರಿಗೆ ಲಾಭದಾಯಕವಾಗುವಂತೆ ದೇಶೀಯ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಗೊಳಿಸುವುದು ತುಂಬ ಮಹತ್ವದ್ದಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಗೊಳಿಸದಿದ್ದರೆ ಇತಿಹಾಸವು ನಮ್ಮನ್ನು ಕ್ಷಮಿಸದು ಎಂದರು.
ಸರಕಾರದ ದೂರಸಂಪರ್ಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವಾಗಿರುವ ಸಿ-ಡಾಟ್ 56 ತಂತ್ರಜ್ಞಾನ ವರ್ಗಾವಣೆಗಳನ್ನು ಮಾಡಿದ್ದು,ಈ ಸಂಖ್ಯೆ ಶತಕವನ್ನು ತಲುಪುವ ನಿರೀಕ್ಷೆಯಿದೆ ಎಂದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಎದುರಿಸುತ್ತಿರುವ ಸಮಸ್ಯೆಗಳನ್ನು ಅಭಿವೃದ್ಧಿಶೀಲ ಜಗತ್ತು ಸಹ ಎದುರಿಸುತ್ತಿದೆ ಮತ್ತು ಅಲ್ಲಿ ನಮ್ಮ ದೇಶವು ನಾಯಕತ್ವದ ಪಾತ್ರವನ್ನು ವಹಿಸಬಹುದಾಗಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News