×
Ad

ನೇಪಾಳದಿಂದ ಪುಣೆಯ ದಂಪತಿಗೆ 10 ವರ್ಷ ಪರ್ವತಾರೋಹಣ ನಿಷೇಧ

Update: 2016-08-30 23:05 IST

ನಕಲಿ ಎವರೆಸ್ಟ್ ಆರೋಹಣ ಕಠ್ಮಂಡು, ಆ.30: ತಾವು ವೌಂಟ್ ಎವರೆಸ್ಟ್ ಶಿಖರವೇರಿದ್ದೇವೆಂದು ನಂಬಿಸುವ ನಕಲಿ ಭಾವಚಿತ್ರಗಳನ್ನು ಪ್ರದರ್ಶಿಸಿದ್ದ ಪುಣೆಯ ದಂಪತಿಗೆ ನೇಪಾಳವು 10 ವರ್ಷ ಪರ್ವತಾರೋಹಣ ನಿಷೇಧವನ್ನು ವಿಧಿಸಿದೆ.

ಮೇ 23ರಂದು ತಾವು ವೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ್ದೇವೆಂದು ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ದಿನೇಶ್ ಹಾಗೂ ತಾರಕೇಶ್ವರಿ ರಾಥೋಡ್ ಎಂಬ ದಂಪತಿ ಹೇಳಿದ್ದರು. ಆದರೆ, ಶಿಖರದ ಮೇಲಿನ ಅವರ ಭಾವಚಿತ್ರಗಳ ನಕಲಿ ಎನ್ನುವ ಮೂಲಕ ಅವರ ಸಹ ಆರೋಹಿಗಳು ಶಂಕೆ ವ್ಯಕ್ತಪಡಿಸಿದ್ದರು.
ಮೊದಲು ದಂಪತಿಯ ಪ್ರತಿಪಾದನೆಯನ್ನು ಪ್ರಮಾಣೀಕರಿಸಿದ್ದ ನೇಪಾಳದ ಪ್ರವಾಸೋದ್ಯಮ ಇಲಾಖೆ, ಬಳಿಕ ತನಿಖೆಯೊಂದನ್ನು ಕೈಗೊಂಡಿತ್ತು.
 ದಂಪತಿ ಎವರೆಸ್ಟ್ ಆರೋಹಣದ ಕುರಿತು ವಂಚಿಸಿದ್ದಾರೆಂಬುದು ತಮ್ಮ ತನಿಖೆಯಲ್ಲಿ ತಿಳಿದುಬಂದಿದೆ. ಅವರಿಗೆ 10 ವರ್ಷಗಳ ಕಾಲ ನೇಪಾಳದ ಯಾವುದೇ ಶಿಖರವನ್ನೇರಲು ನಿಷೇಧ ವಿಧಿಸಿದ್ದೇವೆಂದು ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥ ಸುದರ್ಶನ್ ಪ್ರಸಾದ್ ಢಕಲ್, ಎಪಿಎಫ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News