ಕಾರವಾರ: ಕೊಂಕಣ ರೈಲಿನಲ್ಲಿ ಅಕ್ರಮ ಗೋವಾ ಮದ್ಯ ವಶ
Update: 2016-08-30 23:15 IST
ಉಡುಪಿ, ಆ.30: ಮಡಂಗಾವ್-ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಕಳೆದ ರವಿವಾರ ಅಕ್ರಮವಾಗಿ ಸಾಗಿಸುತಿದ್ದ ಗೋವಾ ಮದ್ಯವನ್ನು ಕಾರವಾರ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ರೈಲು ತಪಾಸಣೆಯ ವೇಳೆ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ರೈಲಿನ ಜನರಲ್ ಬೋಗಿಯಲ್ಲಿ ವಾರಸುದಾರರು ಇಲ್ಲದ ಒಂದು ಕ್ರೇಟನ್ ಬಾಕ್ಸ್ ಹಾಗೂ ನಾಲ್ಕು ಚೀಲಗಳಲ್ಲಿ ಒಟ್ಟು 172 ಬೇರೆ ಬೇರೆ ಬ್ರಾಂಡಿನ ಗೋವಾ ಮದ್ಯ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ವಶಪಡಿಸಿಕೊಳ್ಳಲಾದ ಮದ್ಯದ ಅಂದಾಜು ವೌಲ್ಯ 10,040ರೂ.ಗಳೆಂದು ಹೇಳಲಾಗಿದೆ.