×
Ad

ದರ್ಬೆ: ನವವಿವಾಹಿತ ಆತ್ಮಹತ್ಯೆ

Update: 2016-08-30 23:50 IST

ಬಂಟ್ವಾಳ, ಆ.30: ಆರ್ಥಿಕ ಅಡಚಣೆಯಿಂದ ಮನನೊಂದ ನವವಿವಾಹಿತನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಸಮೀಪದ ದರ್ಬೆ ಎಂಬಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಭುಜಂಗ ಪೂಜಾರಿ ಎಂಬವರ ಪುತ್ರ ಸಂತೋಷ್ ಪೂಜಾರಿ(32) ಆತ್ಮ ಹತ್ಯೆ ಮಾಡಿಕೊಂಡವರು. 10 ತಿಂಗಳ ಹಿಂದೆಯಷ್ಟೇ ಇವರಿಗೆ ವಿವಾಹವಾಗಿತ್ತು. ಕೆಲವು ಸಮಯಗಳಿಂದ ಆರ್ಥಿಕ ಅಡಚಣೆಯಿಂದ ಬಳಲುತ್ತಿದ್ದ ಇವರು, ಮಾನಸಿಕ ವಾಗಿ ನೊಂದಿದ್ದರು. ಕಾರಂಬಡೆ ಮಹಮ್ಮಾಯಿ ದೇವಸ್ಥಾನದ ಬಳಿ ಮರವೊಂದಕ್ಕೆ ಲುಂಗಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News