×
Ad

ನಿರೀಕ್ಷಣಾ ಜಾಮೀನು ಅರ್ಜಿ ವಜಾ

Update: 2016-08-30 23:56 IST

ಪುತ್ತೂರು, ಆ.30: ವಾಹನ ಕಳವು,ಕೊಲೆ,ದರೋಡೆ,ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿ, ಭಟ್ಕಳದ ಅಬ್ದುಸ್ಸಲಾಂ ಯಾನೆ ಸಲಾಂ ಯಾನೆ ಸಲ್ಲು ಎಂಬಾತನ ಸಹಚರ ಸವಣೂರಿನ ತೌಸೀಫ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತಿರಸ್ಕರಿಸಿದೆ. ಭಟ್ಕಳದ ಅಬ್ದುಸ್ಸಲಾಂನನ್ನು ನಗರ ಪೊಲೀಸರು ಬಂಧಿಸಿ 2 ಆಟೊ ರಿಕ್ಷಾ ಮತ್ತು 4 ಬೈಕುಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಆತನ ಇಬ್ಬರು ಸಹಚರರು ತಲೆಮರೆಸಿಕೊಂಡಿದ್ದರು. ಆ ಪೈಕಿ ಸವಣೂರಿನ ತೌಸೀಫ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News