×
Ad

ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕಬಡ್ಡಿ: ‘ಆಳ್ವಾಸ್’ಗೆ ಅವಳಿ ಪ್ರಶಸ್ತಿ

Update: 2016-08-31 15:24 IST

ಮೂಡುಬಿದಿರೆ, ಆ.31: ಮೂಡುಬಿದಿರೆಯ ಹೋಲಿ ರೊಸಾರಿಯೊ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆ.29ರಂದು ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿವೆ. ಫೈನಲ್ ಪಂದ್ಯದಲ್ಲಿ ಆಳ್ವಾಸ್ ಬಾಲಕರ ತಂಡ ವಿಜಯ ಮುಲ್ಕಿ ಪಿ.ಯು. ಕಾಲೇಜು ತಂಡವನ್ನು 39-10 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಳ್ವಾಸ್ ಬಾಲಕಿಯರ ತಂಡ ಉಳ್ಳಾಲದ ಪರಿಜ್ಞಾನ ಪದವಿ ಪೂರ್ವ ಕಾಲೇಜನ್ನು 20-4 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಬಾಚಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News