×
Ad

ನಾವು ಎಂದೂ ಪಾಕಿಸ್ತಾನದ ಭಾಗವಾಗಿರಲಿಲ್ಲ, ಈಗಲೂ ಇಲ್ಲ, ಇನ್ನು ಮುಂದೆಯೂ ಇರುವುದಿಲ್ಲ: ಬಲೂಚ್ ನಾಯಕ

Update: 2016-08-31 17:08 IST

ಹೊಸದಿಲ್ಲಿ,ಆಗಸ್ಟ್ 31: ಪಾಕಿಸ್ತಾನದ ದೌರ್ಜನ್ಯ ಹೆಚ್ಚುತ್ತಿರುವುದನ್ನು ವಿರೋಧಿಸಿ ಬಲೂಚಿಸ್ತಾನಿ ಜನರು ಪಾಕಿಸ್ತಾನದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆಂದು ವರದಿಯಾಗಿದೆ. ಲಂಡನ್‌ನ ನಂತರ ಈಗ ಜರ್ಮನಿಯಲ್ಲಿಯೂ ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನದ ಜನರು ಬೀದಿಗಿಳಿದಿದ್ದು, ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಬಲೂಚ್ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷ ಬ್ರಹ್ಮದಾಗ್ ಬುಗ್ತಿ ವೀಡಿಯೊ ಸಂದೇಶದಲ್ಲಿ ನರೇಂದ್ರಮೋದಿ ಬಲೂಚಿಸ್ತಾನ ಸ್ವಾತಂತ್ರ್ಯದ ವಿಷಯವೆತ್ತಿದ್ದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದ್ದಾರೆಂದು ವರದಿ ತಿಳಿಸಿದೆ.b

  ಬುಗ್ತಿ ಸಂದೇಶದಲ್ಲಿ "ನಾವು ಎಂದೂ ಪಾಕಿಸ್ತಾನದ ಭಾಗವಾಗಿರಲಿಲ್ಲ, ಈಗಲೂ ಇಲ್ಲ, ಇನ್ನು ಮುಂದೆಯೂ ಇರುವುದಿಲ್ಲ" ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಬಲೂಚಿಸ್ತಾನದ ಜನರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಎಂದೂ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ, 1970ರಲ್ಲಿ ಪಾಕಿಸ್ತಾನ ಸೇನೆ ಬಾಂಗ್ಲಾದೇಶವನ್ನು ಹೇಗೆ ತೊರೆಯಬೇಕಾಗಿ ಬಂದಿದೆಯೋ ಅದೇ ರೀತಿ ಬಲೂಚಿಸ್ತಾನವನ್ನು ಅದು ತೊರೆದು ಹೋಗುವ ಪರಿಸ್ಥಿತಿ ಬರಲಿದೆ ಎಂದು ಬುಗ್ತಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News