ಕಿನ್ಯಾ ಒಲಿಂಪಿಕ್ ಚಿನ್ನ ವಿಜೇತೆಗೆ ನೀಡಿದ ಬಹುಮಾನವೇನು ಗೊತ್ತೇ ?

Update: 2016-08-31 13:42 GMT

ಹೊಸದಿಲ್ಲಿ, ಆ. 31 : ಭಾರತದ ಸಿಂಧು ಮತ್ತು ಸಾಕ್ಷಿ ಮಲಿಕ್ ಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಹಾಗು ಕಂಚಿನ ಪದಕ ಪಡೆದಿದ್ದಕ್ಕೆ ಕೋಟಿಗಟ್ಟಲೆ ರೂಪಾಯಿ ಹಾಗು ವಿಲಾಸಿ ಬಿ ಎಂ ಡಬ್ಲ್ಯೂ ಕಾರು ಇತ್ಯಾದಿಗಳು ಉಡುಗೊರೆಯಾಗಿ ಸಿಕ್ಕಿವೆ. ಆ ಎಲ್ಲ ಬಹುಮಾನಗಳಿಗೆ ಅವರು ಅರ್ಹರೂ ಕೂಡ. 

ಆದರೆ ಕಿನ್ಯಾ ದೇಶದ ಕ್ರೀಡಾಪಟು ವೊಬ್ಬರು ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದು ತವರಿಗೆ ಮರಳಿದಾಗ ಅವರಿಗೆ ನೀಡಲಾದ ಉಡುಗೊರೆ ಮಾತ್ರ ನಮಗೆ ಅಲ್ಲಿನ ವಾಸ್ತವವನ್ನು ಕಟ್ಟಿ ಕೊಡುತ್ತದೆ. 

ಕಿನ್ಯಾದ ಫೇತ್ ಕಿಪ್ಯೆಜೋನ್ 1,500 ಮೀಟರ್ ಓಟದಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗಳಿಸಿ ವಿಶೇಷ ಸಾಧನೆ ಮಾಡಿದರು. ಆದರೆ ಅವರು ರಿಯೋದಲ್ಲಿ ಜಗಮಗಿಸುವ ಕ್ರೀಡಾಂಗಣದಲ್ಲಿ ಚಿನ್ನದ ಪದಕ ಕೊರಳಿಗೆ ಇಳಿಸುವಾಗ ಕೀನ್ಯಾದ ಅವರ ದಬೀಬಿತ್ ಗ್ರಾಮದಲ್ಲಿ ಕಗ್ಗತ್ತಲು. ಏಕೆಂದರೆ ಎಲ್ಲಿ ಈವರೆಗೆ ವಿದ್ಯುತ್ ಸಂಪರ್ಕವೇ ಬಂದಿಲ್ಲ. 

ಚಿನ್ನ ಪಡೆದು ಫೇತ್ ತನ್ನ ತವರಿಗೆ ಮರಳಿದಾಗ ಅವರ ತಂದೆ ಕಿನ್ಯಾದ ಅಧ್ಯಕ್ಷರಿಗೆ ವಿಶೇಷ ಮನವಿ ಮಾಡಿ ತಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿ ಇನ್ನು ಮುಂದಾದರೂ ತನ್ನ ಮಗಳು ಸ್ಪರ್ಧಿಸಿ ದೇಶಕ್ಕೆ ಪದಕ ಗೆಲ್ಲುವುದನ್ನು ನೋಡಲು ಅನುವು ಮಾಡಿಕೊಡಬೇಕು ಎಂದು ಕೇಳಿಕೊಂಡರು. ಅವರ ಮನವಿಯನ್ನು ಪುರಸ್ಕರಿಸಿದ ಅಧ್ಯಕ್ಷರು ಮರುದಿನವೇ ತಂಡವನ್ನು ಅವರ ಗ್ರಾಮಕ್ಕೆ ಕಳಿಸಿ ಕೇವಲ 9 ದಿನಗಳಲ್ಲೇ ವಿದ್ಯುತ್ ತಂತಿ ಹಾಕಿಸಿ ಸಂಪರ್ಕ ಕೊಟ್ಟು ಬಿಟ್ಟರು. ಕೊನೆಗೂ ಒಲಿಂಪಿಕ್ಸ್ ಚಾಂಪಿಯನ್ ನಿಂದಾಗಿ ಆಕೆಯ ಗ್ರಾಮ ವಿದ್ಯುತ್ ಕಾಣುವಂತಾಯಿತು. 

ಈ ಬಳಿಕ ಸ್ಯಾಮ್ ಸಂಗ್, ಫೇತ್ ಗೆ ಫ್ಲಾಟ್ ಸ್ಕ್ರೀನ್ ಟಿವಿಯೊಂದನ್ನು ಉಡುಗೊರೆಯಾಗಿ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News