×
Ad

ಪ್ರಧಾನಿ ವಾಜಪೇಯಿಗೆ ಮೌಲಾನಾ ಅಲಿ ಮಿಯಾ ಹೇಳಿದ್ದೇನು ?

Update: 2016-08-31 19:22 IST

ಮುಂಬೈ, ಆ. 31 : ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶುಕ್ರವಾರ ಎಲ್ಲ ಬಿಎಂಸಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಹಾಗು ಯೋಗ ಕಡ್ಡಾಯ ಮಾಡಿ ನಿರ್ಣಯ ಅಂಗೀಕರಿಸಿದ್ದು ಈ ಬಗ್ಗೆ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿಂದೆ ಸೂರ್ಯ ಸಮಸ್ಕಾರ ಹಾಗು ವಂದೇ ಮಾತರಂ ಕಡ್ಡಾಯ ಮಾಡಿದ್ದಾಗ ಅಂದಿನ  ಪ್ರಧಾನಿ ವಾಜಪೇಯಿ ಹಾಗು ಮೌಲಾನಾ ಅಲೀ ಮಿಯಾ ಅವರ ಭೇಟಿಯನ್ನು ಉಲ್ಲೇಖಿಸಿ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಡುತ್ತಿವೆ. ಆದರೆ ಆ ಭೇಟಿಯಲ್ಲಿ ನಿಜವಾಗಿ ಮೌಲಾನಾ ಅವರು ಹೇಳಿದ್ದೇನು ಎಂದು ಇದೀಗ ಬಹಿರಂಗವಾಗಿದೆ.

http://ummid.com ವರದಿ ಮಾಡಿರುವ ಪ್ರಕಾರ ಅಂದು ಸೂರ್ಯ ಸಮಸ್ಕಾರ ಹಾಗು ವಂದೇ ಮಾತರಂ ಕಡ್ಡಾಯ ಆದೇಶದ ವಿರುದ್ಧ ದೇಶಾದ್ಯಂತ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಲಕ್ನೋಗೆ ಭೇಟಿ ನೀಡಿದ್ದ ಪ್ರಧಾನಿ ವಾಜಪೇಯಿ ಅವರು ನದ್ವತುಲ್ ಉಲಮಾ ಮುಖ್ಯಸ್ಥ ಹಾಗು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲಾನಾ ಸಯ್ಯದ್ ಅಬುಲ್ ಹಸನ್ ಅಲಿ ನದ್ವಿ ( ಮೌಲಾನಾ ಅಲಿ ಮಿಯಾ ಎಂದೇ ಪ್ರಖ್ಯಾತ) ಅವರನ್ನು ಭೇಟಿಯಾಗಿದ್ದರು. 

ಆಗ ಸೂರ್ಯ ಸಮಸ್ಕಾರ ಹಾಗು ವಂದೇ ಮಾತರಂ ಕಡ್ಡಾಯದ ವಿಷಯದಲ್ಲಿ ತಮಗೆ ಬೆಂಬಲ ನೀಡಬೇಕು ಎಂದು ವಾಜಪೇಯಿ ಅವರು ಅಲಿ ಮಿಯಾ ಅವರನ್ನು ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಮೌಲಾನಾ ಅಲಿ ಮಿಯಾ ಅವರು "ಎಲ್ಲ ಮುಸ್ಲಿಂ ಮಕ್ಕಳು ಅನಕ್ಷರಸ್ಥರಾದರೂ ಪರವಾಗಿಲ್ಲ. ಆದರೆ ಅವರ ಧಾರ್ಮಿಕ ನಂಬಿಕೆಗೆ ವಿರುದ್ಧವಾದ ಕೆಲಸ ಮಾಡಲು ನಾನು ಅವರಿಗೆ ಹೇಳುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News