×
Ad

ಎಟಿಎಂ ಯಂತ್ರವನ್ನೇ ಕದಿಯಲು ಹೋಗಿ ಈ ಮೂರ್ಖ ಕಳ್ಳರು ಮಾಡಿದ್ದೇನು ಗೊತ್ತೇ ?

Update: 2016-08-31 19:42 IST

ಗುವಾಹಟಿ, ಆ. 31 : ಕಳ್ಳತನ ಮಾಡುವುದಕ್ಕೂ ಸ್ವಲ್ಪ ಪರಿಶ್ರಮ, ಯೋಜನೆ ಹಾಗು ಬುದ್ಧಿವಂತಿಕೆ ಬೇಕು. ಇಲ್ಲದಿದ್ದರೆ ಹಾಕಿದ ಶ್ರಮಕ್ಕೆ ಯಾವುದೇ ಬೆಲೆ ಸಿಗುವುದಿಲ್ಲ ಎಂಬುದಕ್ಕೆ ಈ ನಾಲ್ಕು ಕಳ್ಳರೇ ಸಾಕ್ಷಿ. 

ಇವರು ಯೋಜನೆ ಹಾಕಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಯಂತ್ರ ಎತ್ತಿಕೊಂಡು ಹೋಗಿ ರಾತ್ರೋರಾತ್ರಿ ಲಕ್ಷಾಧೀಶರಾಗಲು. ಆದರೆ ಆದದ್ದೇ ಬೇರೆ. ಸರಿಯಾಗಿ ನೋಡದೆ, ಆಲೋಚಿಸದೆ ಈ ಕಳ್ಳರು ಎತ್ತಿಕೊಂಡು ಹೋಗಿದ್ದು ಬ್ಯಾಂಕಿನ ಪಾಸ್ ಬುಕ್ ಮುದ್ರಿಸುವ ಯಂತ್ರವನ್ನು ! 

ಇದಕ್ಕಾಗಿ ಗಣ್ಯರೊಬ್ಬರ ಕಾರು ಕದ್ದ ಈ ಕಳ್ಳರು ಅದರಲ್ಲಿ ಈ ಪಾಸ್ ಬುಕ್ ಮುದ್ರಣ ಯಂತ್ರವನ್ನು ಕದ್ದು ಸಾಗಿಸುವಾಗ ಬಿನೋವ ನಗರ್ ಎಸ ಬಿ ಐ ಕಟ್ಟಡದ ಬಳಿ ಪೊಲೀಸರಿಗೆ ಸಿಕ್ಕಿ ಬಿದ್ದು 'ಮಾವನ ಮನೆ ' ಸೇರಿದ್ದಾರೆ. ಸಾಹಬ್ ಅಲಿ, ಸೈಫುಲ್ ರಹ್ಮಾನ್, ಮೈನುಲ್ ಹಕ್ ಹಾಗು ಸದ್ದಾಮ್ ಹುಸೇನ್ ಎಂದು ಈ ನಾಲ್ವರನ್ನು ಗುರುತಿಸಲಾಗಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News