ಜಂಟಿಯಾಗಿ ಬೋಯಿಂಗ್ ವಿಮಾನ ಹಾರಿಸಿ ಇತಿಹಾಸ ಸೃಷ್ಟಿಸಿದ ಸೋದರಿಯರು

Update: 2016-08-31 16:09 GMT

ಇಸ್ಲಾಮಾಬಾದ್,ಆ.31: ಸರಕಾರಿ ಸ್ವಾಮ್ಯದ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್(ಪಿಐಎ)ನಲ್ಲಿ ಪೈಲಟ್‌ಗಳಾಗಿರುವ ಇಬ್ಬರು ಪಾಕ್ ಸೋದರಿಯರು ಬೋಯಿಂಗ್ 777 ವಿಮಾನವನ್ನು ಜಂಟಿಯಾಗಿ ಹಾರಿಸಿದ್ದಾರೆ, ತನ್ಮೂಲಕ ಈ ಸಾಧನೆ ಮಾಡಿದ ಇಂತಹ ಮೊದಲ ಜೋಡಿಯಾಗಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.


ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪಿಐಎ ವಕ್ತಾರ ದನ್ಯಾಲ್ ಗಿಲಾನಿ ಅವರು, ಸೋದರಿಯರಾದ ಮರ್ಯಂ ಮಸೂದ್ ಮತ್ತು ಇರಮ್ ಮಸೂದ್ ಅವರು ಬೇರೆ ಬೇರೆ ವಿಮಾನಗಳನ್ನು ಹಾರಿಸುತ್ತಿದ್ದರು,ಕೊನೆಗೂ ಒಂದೇ ವಿಮಾನದಲ್ಲಿ ಜೊತೆಯಾದರು ಎಂದು ಹೇಳಿದರು.


ಈ ಸೋದರಿಯರು ಜೊತೆಯಾಗಿ ಲಾಹೋರಿನಿಂದ ಕರಾಚಿ, ಮ್ಯಾಂಚೆಸ್ಟರ್, ನ್ಯೂಯಾರ್ಕ್ ಮತ್ತು ಲಂಡನ್‌ಗೆ ಬೋಯಿಂಗ್ 777 ವಿಮಾನವನ್ನು ಹಾರಿಸಿದ್ದಾರೆ.
 ಇರಮ್ ಇತ್ತೀಚಿಗಷ್ಟೇ ಬೋಯಿಂಗ್-777 ವಿಮಾನದ ಪೈಲಟ್ ಆಗಿ ಬಡ್ತಿಯನ್ನು ಪಡೆದಿದ್ದಾರೆ ಮತ್ತು ತನ್ಮೂಲಕ ವಿಮಾನದ ಕಾಕ್‌ಪಿಟ್‌ನಲ್ಲಿ ಸೋದರಿ ಮರ್ಯಂ ಜೊತೆಗೆ ಕರ್ತವ್ಯ ನಿರ್ವಹಣೆಯ ಅವಕಾಶ ಒಲಿದು ಬಂದಿದೆ.


ಈ ಹಿಂದೆಯೂ ವೈಮಾನಿಕ ಕ್ಷೇತ್ರದಲ್ಲಿ ಪಾಕ್ ಮಹಿಳೆಯರು ದೇಶಕ್ಕೆ ಗೌರವವನ್ನು ತಂದಿದ್ದಾರೆ. 2006ರಲ್ಲಿ ಏಳು ಮಹಿಳೆಯರು ಪಾಕಿಸ್ತಾನ ವಾಯುಪಡೆಯಲ್ಲಿ ಯುದ್ಧವಿಮಾನ ಪೈಲಟ್‌ಗಳಾಗಿ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News