ಯಮನ್ ಸಂಘರ್ಷದಲ್ಲಿ 10,000 ಸಾವು: ವಿಶ್ವಸಂಸ್ಥೆ

Update: 2016-08-31 16:58 GMT


ಸನಾ, ಆ. 31: ಯಮನ್ ಅಂತರ್ಯುದ್ಧದಲ್ಲಿ ಕನಿಷ್ಠ 10,000 ಮಂದಿ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ಸಮನ್ವಯಕಾರ ಜೇಮೀ ಮೆಕ್‌ಗೋಲ್ಡ್‌ರಿಕ್ ಹೇಳಿದ್ದಾರೆ.


ಸಂಘರ್ಷದಲ್ಲಿ ಸಂಭವಿಸಿದ ಸಾವು-ನೋವುಗಳ ಪರಿಷ್ಕೃತ ಅಂಕಿಅಂಶಗಳನ್ನು ಅವರು ಮಂಗಳವಾರ ಇಲ್ಲಿ ಪತ್ರಕರ್ತರಿಗೆ ನೀಡಿದರು.
 ಯಮನ್‌ನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ವಿರುದ್ಧ ಶಿಯಾ ಹೌದಿ ಬಂಡುಕೋರರು ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್‌ರಿಗೆ ನಿಷ್ಠರಗಿರುವ ಪಡೆಗಳ ಜೊತೆ ಸೇರಿ ಬಂಡಾಯ ಘೋಷಿಸಿದ್ದಾರೆ. ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ಸರಕಾರದ ಬೆಂಬಲಕ್ಕೆ ನಿಂತಿದ್ದು ಬಂಡುಕೋರರ ನೆಲೆಗಳ ಮೇಲೆ ವಾಯು ದಾಳಿ ನಡೆಸುತ್ತಿವೆ.


2012ರಲ್ಲಿ ನಡೆದ ಅರಬ್ ಬಂಡಾಯದ ಅವಧಿಯಲ್ಲಿ ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅಧಿಕಾರದಿಂದ ಕೆಳಗಿಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News