×
Ad

ಚೀನಾ ಫೆಸ್ಟಿವಲ್‌ಗೆ ಐವನ್

Update: 2016-08-31 22:58 IST

ಮಂಗಳೂರು, ಆ.31: ಸೆಪ್ಟಂಬರ್ 4 ರಿಂದ 7ರವರೆಗೆ ಚೀನಾದಲ್ಲಿ ನಡೆಯಲಿರುವ ಜಿನಾನ್ ಸ್ಪಿರಿಂಗ್ ಫೆಸ್ಟಿವಲ್-2016ರಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಆಯ್ಕೆಯಾಗಿದ್ದಾರೆ.

ಚೀನಾ ದೇಶದ ಜಿನಾನ್ ಮುನ್ಸಿಪಲ್ ಪೀಪಲ್ಸ್ ಗೌವರ್ನಮೆಂಟ್‌ನ ಆಹ್ವಾನದ ಮೇರೆಗೆ ಇಂಡೋ-ಚೈನಾ ಫ್ರೆಂಡ್ಸ್ ಅಸೋಸಿಯೇಷನ್ ಮುಖೇನ ಈ ಫೆಸ್ಟಿವಲ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಸರಕಾರಿ ಮುಖ್ಯ ಸಚೇತಕರ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News