×
Ad

ಮೂಡುಬಿದಿರೆ: ಅಲ್-ಪುರ್ಖಾನ್ ಶಾಲೆಯಲ್ಲಿ ವಿಶಿಷ್ಟ ಪರಿಸರ ದಿನ

Update: 2016-08-31 23:31 IST

ಮೂಡುಬಿದಿರೆ, ಆ.31: ಪುತ್ತಿಗೆಯ ಅಲ್ - ಪುರ್ಖಾನ್ ಇಸ್ಲಾವಿೂ ಆಂಗ್ಲ ಮಾಧ್ಯಮ ಶಾಲೆಯಇಲ್ಲಿ ಇತ್ತೀಚೆಗೆ ‘ಪರಿಸರ ದಿನ’ವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಪ್ರಕೃತಿಯ ಬಗ್ಗೆ ಕಾರ್ಯಗಾರ, ಕೃಷಿ ಭೂಮಿಯಲ್ಲಿ ‘ನಾಟಿ ಪ್ರಾತ್ಯಕ್ಷಿಕೆ’ ‘ಅರಣ್ಯನಾಶ’ ಮತ್ತು ‘ಅರಣ್ಯೀಕರಣ’ದ ವಿಷಯದಲ್ಲಿ ವಿವಿಧ ಮಾದರಿಗಳು, ಫಾರ್ಮ್ ಭೇಟಿ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರಕೃತಿ, ಕೃಷಿ, ಅರಣ್ಯ, ತೋಟಗಾರಿಕೆ ಮುಂತಾದವುಗಳ ಬಗ್ಗೆ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಲಾಯಿತು.

ಬರ್ಕಳ ಎಂಬ ಹಳ್ಳಿಯಲ್ಲಿರುವ ಸುಮಾರು 6 ಎಕರೆ ಜಮೀನಿನಲ್ಲಿ ನೆಟ್ಟ ರಬ್ಬರ್ ತೋಟದಲ್ಲಿ ಕಚ್ಛಾವಸ್ತುವಿನಿಂದ ಹಿಡಿದು ಸಿದ್ದವಸ್ತುವಿನವರೆಗೆ ನಡೆಯುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಕೃಷಿಕ ಮುಶ್ತಾಕ್ ಅವರು ಪ್ರಾಯೋಗಿಕವಾಗಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದರು.

ಕಿಂಗ್ ಅಬ್ದುಲ್ ಅಝೀಝ್ ಯುನಿವರ್ಸಿಟಿಯಲ್ಲಿ ಇಂಗ್ಲೀಷ್ ಉಪನ್ಯಾಸಕಿ ಆಝ್ರಾ ’ಪರಿಸರವನ್ನು ಪ್ರೀತಿಸಿ’ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಪರಿಸರವನ್ನು ಪ್ರೀತಿಸುವುದು ಪ್ರವಾದಿಚರ್ಯೆಯ ಭಾಗವಾಗಿದೆ ಎಂದರು.

ಅಲ್ಲದೆ, ‘ಅರಣ್ಯನಾಶ’ ಮತ್ತು ‘ಅರಣ್ಯೀಕರಣ’ ಎಂಬ ವಿಷಯದಲ್ಲಿ ವಿವಿಧ ರೀತಿಯ ಮಾದರಿಗಳನ್ನು ತಯಾರಿಸಿ ಅವುಗಳ ಬಗ್ಗೆ ವಿವರಿಸಿದರು. ಮಾಧ್ಯಮಿಕ ಶಾಲಾ ವಿಧ್ಯಾರ್ಥಿಗಳು ’ಸೋನ್ಸ್ ಫಾರ್ಮ್’ನ ತೋಟಕ್ಕೆ ಭೇಟಿ ನೀಡಿ ’ತೋಟಗಾರಿಕೆ’ ಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದರು.

ವಿದ್ಯಾಸಂಸ್ಥೆಯ ನಿರ್ದೇಶಕ ಮುಮ್ತಾಝ್, ಟ್ರಸ್ಟಿಗಳಾದ ಮುಹಮ್ಮದ್ ಅಶ್ಪಕ್, ಮುಹಮ್ಮದ್ ಶಹಾಮ್, ಝುಲೈಕಾ ಆಝ್ರಿ, ಪ್ರಿನ್ಸಿಪಾಲ್ ನಝರಾನ, ಅರೇಬಿಕ್ ಮುಖ್ಯಸ್ಥ ಶೇಖ್ ತೌಸೀಫ್, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News