ಆತ್ಮಹತ್ಯೆಗೆ ಯತ್ನ
Update: 2016-08-31 23:45 IST
ಮಲ್ಪೆ, ಆ.31: ತೆಂಕನಿಡಿಯೂರು ಗ್ರಾಮದ ಉದ್ದಿನ ಹಿತ್ಲು ಎಂಬಲ್ಲಿ ವ್ಯಕ್ತಿಯೊಬ್ಬರು ವೈಯಕ್ತಿಕ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಉದ್ದಿನಹಿತ್ಲು ನಿವಾಸಿ ರಘು ಪೂಜಾರಿಯ ಮಗ ಉದಯ (32) ಎಂಬವರು ಆ.26ರಂದು ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಮನೆಯವರು ಬಾಗಿಲು ಮುರಿದು ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.