×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2016-08-31 23:45 IST

ಕೊಲ್ಲೂರು, ಆ.31: ಇಲ್ಲಿನ ಸುಬ್ಬರಸನತೊಪ್ಲು ನಿವಾಸಿ ವಿಶ್ವನಾಥ ಗಾಣಿಗ ಎಂಬವರ ಮಗ ವಿಘ್ನೇಶ ಗಾಣಿಗ (27) ಎಂಬವರು ಆ.30ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಅಜೆಕಾರು: ವೈಯಕ್ತಿಕ ಕಾರಣದಿಂದ ಮನನೊಂದ ಅಜೆಕಾರ್ ಮರ್ಣೆ ಗ್ರಾಮದ ಇಸರ್‌ಮಜಲ್‌ನ ರಾಘವೇಂದ್ರ ನಾಯ್ಕಾ (55) ಎಂಬವರು ಆ.30ರಂದು ಬೆಳಗ್ಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News