ಅವಹೇಳನಕಾರಿ ಹೇಳಿಕೆ ವಿರುದ್ಧ ಖಂಡನೆ
Update: 2016-08-31 23:47 IST
ಉಳ್ಳಾಲ, ಆ.31: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕುರಿತಾಗಿ ಅವ ಹೇಳನಕಾರಿ ಹೇಳಿಕೆ ಹಾಗೂ ದೇವರ ಚಿತ್ರವನ್ನು ಅಶ್ಲೀಲ ಭಂಗಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಿದ ವ್ಯಕ್ತಿಯ ಕೃತ್ಯವನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸರ್ವಧರ್ಮೀಯರನ್ನೊಳಗೊಂಡ ತಂಡ ಬುಧವಾರ ಖಂಡಿಸಿತು.
ಈ ಸಂದರ್ಭ ಚಂದ್ರಹಾಸ್ ಉಳ್ಳಾಲ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಡಾ. ಹಾಜಿ ಕೆ.ಎ. ಮುನೀರ್ ಬಾವಾ, ಮೋಹನ್ ರಾಜ್ ಕೆ.ಆರ್. ಮನೋಜ್ ಆಚಾರ್ಯ, ಸಂಜೀವ ಶೆಟ್ಟಿ ಅಂಬ್ಲಮೊಗರು, ದೇವದಾಸ್, ಅಜಿತ್ ಉಳ್ಳಾಲ್, ಸುಜಿತ್, ಭರತ್ ಹಾಗೂ ಹರಿಯಪ್ಪಸಾಲಿಯಾನ್ ಉಪಸ್ಥಿತರಿದ್ದರು.