×
Ad

ಪಿಡಬ್ಲುಡಿ ಬದಿಯಡ್ಕ ಸೆಕ್ಷನ್‌ಗೆ ಬೀಗ ಜಡಿದು ಪ್ರತಿಭಟನೆ

Update: 2016-08-31 23:48 IST

ಮಂಜೇಶ್ವರ, ಆ.31: ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆಯ ಸಮಸ್ಯೆಗೆ ಪರಿಹಾರ ಕಲ್ಪಿ ಸಬೇಕು ಎಂದು ಒತ್ತಾಯಿಸಿ ಜನಪರ ಹೋರಾಟ ಸಮಿತಿಯ ನೇತೃತ್ವ ದಲ್ಲಿ ಬುಧವಾರ ಪಿಡಬ್ಯುಡಿ ಬದಿಯಡ್ಕ ಸೆಕ್ಷನ್‌ಗೆ ಬೀಗ ಜಡಿದು ಪ್ರತಿಭಟಿಸಲಾಯಿತು. ಬದಿಯಡ್ಕ ಗ್ರಾಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಮಾಹೀನ್ ಕೇಳೋಟ್, ರಾಮಪಾಟಾಳಿ, ಸುಧಾಮ ಗೋಸಾಡ, ಜನಾರ್ದನ, ಅನ್ವರ್, ಬಿ.ಟಿ. ಅಬ್ದುಲ್ಲ, ಅವಿನಾಶ್ ರೈ, ನಾರಾಯಣ ಭಟ್, ಶ್ಯಾಮ್‌ಪ್ರಸಾದ್, ಅಶ್ರಫ್ ಮುನಿಯೂರು, ಡಾ. ರಾಜೇಶ್ ಆಳ್ವ , ಅಖಿಲೇಶ್ ನಗುಮುಗಂ, ಸಿ.ಕೆ. ಚಂದ್ರನ್, ರಮೇಶ್, ಕೆ.ಎಸ್. ಮುಹಮ್ಮದ್, ಸಮಿತಿಯ ಸಂಚಾಲಕ ಬಾಲಕೃಷ್ಣ ಶೆಟ್ಟಿ, ಖಾಲಿದ್ ವಿದ್ಯಾಗಿರಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News