ನಿಧನ
Update: 2016-08-31 23:53 IST
ಕಮಲಾವತಿ
ಮೂಡುಬಿದಿರೆ, ಆ.31: ಮೂಡುಬಿದಿರೆಯ ದಿ.ಪಟ್ನಶೆಟ್ಟಿ ಚಂದಯ್ಯ ಶೆಟ್ಟಿಯ ಪತ್ನಿ ಪಣಪಿಲ ಕೊನ್ನಾರ ಮಾಗಣೆ ಅರಮನೆಯ ಕಮಲಾವತಿ ಅಮ್ಮ ( 94) ಮಂಗಳ ವಾರ ಪಣಪಿಲ ಅರಮನೆಯಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ನೆಲ್ಲಿಕಾರು ಅನಂತನಾಥ ಸ್ವಾಮಿ ಬಸದಿ ಹಾಗೂ ಧರೆಗುಡ್ಡೆಯ ಶ್ರೀ ವಿಠಲ ಸೋಮನಾಥೇಶ್ವರ ದೇವಳದ ಆನುವಂಶಿಕ ಮೊಕ್ತೇಸರರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಮೂಡುಬಿದಿರೆಯ ಜೈನ ಮಠದ ಭಟ್ಟಾರಕ ಸ್ವಾಮೀಜಿ ಸದ್ಗತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ, ಕೆ.ಪಿ. ಜಗದೀಶ ಅಧಿಕಾರಿ ಸಂತಾಪ ಸೂಚಿಸಿದ್ದಾರೆ