×
Ad

ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

Update: 2016-09-01 17:02 IST

ಬಂಟ್ವಾಳ, ಸೆ. 1: ಗಣೇಶ ಚತುರ್ಥಿ ಹಾಗೂ ಬಕ್ರಿದ್ ಹಬ್ಬದ ಪ್ರಯುಕ್ತ ವಿಟ್ಲ ಪೊಲೀಸ್ ಠಾಣೆಯಲ್ಲಿ ಗುರವಾರ ಎಸೈ ಪ್ರಕಾಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ಶಾಂತಿ ಸಬೆ ನಡೆಯಿತು. ಸಬೆಯಲ್ಲಿ ಉಪಸ್ಥಿತಿರಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು.

ಸಬೆಯನ್ನುದ್ದೇಶಿಸಿ ಮಾತನಾಡಿದ ಎಸ್ಸೈ ಪ್ರಕಾಶ್ ದೇವಾಡಿಗ, ಸಮಾಜದಲ್ಲಿ ಶಾಂತಿ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸದ ನೀಡಬಾರದು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಕೂಡಾಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಗಣೇಶ ವಿಗ್ರಹ ಸ್ಥಾಪನೆ ಹಾಗೂ ಶೋಭಾಯಾತ್ರೆಯ ಸ್ಥಳದಲ್ಲಿ ಸಂಘಟಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಬೇಕು. ವಿಗ್ರಹಕ್ಕೆ ಹಾಕುವ ಚಿನ್ನಾಭರಣದ ರಕ್ಷಣೆ ಸಂಘಟಕರ ಜವಾಬ್ದಾರಿಯಾಗಿದ್ದು ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು. ಗಣೇಶೋತ್ಸವ ಮಂಟಪದಲ್ಲಿ ಪ್ರ ನೀಡುವ ಉದ್ದೇಶದಿಂದ ಧ್ವನಿವರ್ಧಕಗಳನ್ನು ಅಳವಡಿಸಬೇಕು. ಮೆರವಣಿಗೆ ಸಾಗುವ ಸ್ಥಳದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಬಗ್ಗೆ ವೀಡಿಯೊ ಚಿತ್ರೀಕರಣ ಮಾಡಬೇಕು. ಸಬೆಯಲ್ಲಿ ಯಾವುದೇ ಧರ್ಮದ ವಿರುದ್ಧ ಅಥವಾ ಕೋಮು ಬಾವನೆ ಕೆರಳಿಸುವ ಬಾಷಣ ಮಾಡಬಾರದು. ಮೆರವಣಿಗೆ ವೇಳೆ ಅವಹೇಳನಕಾರಿ ಘೋಷಣೆ ಕೂಗಬಾರದು ಎಂದು ಅವರು ಹೇಳಿದರು.

ಸಭೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ ವಿಟ್ಲ, ಸದಸ್ಯ ರಾಮದಾಸ ಶೆಣೈ, ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿ, ಕನ್ಯಾನ ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್, ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಪುಣಚ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯಕುಮಾರ್ ದಂಬೆ, ಕೊಳ್ನಾಡು ಗ್ರಾ.ಪಂ. ಸದಸ್ಯ ಯೂಸುಪ್ ತಾಳಿತ್ತನೂಜಿ, ಕೆಲಿಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್, ಕನ್ಯಾನ ಭಾರತ ಸೇವಾಶ್ರಮದ ಪ್ರತಿನಿಧಿ ಪರಶುರಾಮ, ಹಮೀದ್ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರವೀಣ್ ರೈ ಸ್ವಾಗತಿಸಿದರು. ರಮೇಶ ವಂದಿಸಿದರು. ಶ್ರೀಧರ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News