×
Ad

‘ಯುನೈಟೆಡ್ ಫೋರ್ ಎ ಬೆಟರ್ ಮಂಗಳೂರು’ ತಂಡದಿಂದ ಪೊಲೀಸ್ ಆಯುಕ್ತರ ಭೇಟಿ

Update: 2016-09-01 17:58 IST

ಮಂಗಳೂರು, ಸೆ.1: ಸೆ.9ರಂದು ನಗರದ ಪುರಭವನದಲ್ಲಿ ‘ಯುನೈಟೆಡ್ ಫೋರ್ ಎ ಬೆಟರ್ ಮಂಗಳೂರು’ (ಉತ್ತಮ ಮಂಗಳೂರಿಗಾಗಿ ಒಂದಾಗೋಣ) ಘೋಷಣೆಯೊಂದಿಗೆ ನಡೆಯಲಿರುವ ವಿವಿಧ ಸಾಮಾಜಿಕ ಮತ್ತು ಜಾತಿ ಸಂಘಟನೆಗಳ ಐಕ್ಯತಾ ಸಮಾವೇಶದ ಪೂರ್ವ ತಯಾರಿಯ ಬಗ್ಗೆ ಸಂಘಟನಾ ತಂಡವು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಹಾಗೂ ನಗರ ಉಪ ಆಯುಕ್ತ ಸಂಜೀವ್ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಈ ಸಂದರ್ಭ ತಂಡದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್ ಸುಲ್ತಾನ್, ಯುವ ವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರೆಮನಾಥ್ ಕೆ., ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಶ್ರೀ ಗುರು ಸಿಂಗ್ ಸಭಾ ಸೊಸೈಟಿಯ ಇಕ್ಬಾಲ್ ಸಿಂಗ್ ರಾಥೋರ್, ಎಚ್‌ಐಎಫ್‌ನ ಅಧ್ಯಕ್ಷ ನಾಝಿಮ್ ಎಸ್.ಎಸ್., ಅಹಿಂದ ಜಿಲ್ಲಾಧ್ಯಕ್ಷ ವಾಸುದೇವ್ ಬೊಳೂರು, ಅಲ್ ಹಖ್ ಫೌಂಡೇಶನ್ ಅಧ್ಯಕ್ಷ ಅಬ್ದುಸ್ಸಮದ್, ಸದಸ್ಯ ಸಲೀಂ, ಕೆಎಂನ ರಾಜ್ಯ ಸಂಚಾಲಕ ಎಸ್.ಎಂ. ಫಾರೂಕ್, ಜೈನ್ ಸಮಿತಿಯ ಭರತ್ ಜೈನ್, ಟಿಆರ್ಎಫ್‌ನ ಅಧ್ಯಕ್ಷ ರಿಯಾಝ್ ಅಹ್ಮದ್, ಹೋಪ್ ಫೌಂಡೇಶನ್‌ನ ಶಬೀಬ್ ಹಾಗೂ ಶರಾಫತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News