×
Ad

ಅಣ್ಣನ ಸಾವಿನಿಂದ ನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಮ್ಮ

Update: 2016-09-01 20:16 IST

ಮಂಗಳೂರು, ಸೆ.1: ತನ್ನ ಅಣ್ಣನ ಸಾವಿನಿಂದ ಬೇಸತ್ತ ಯುವಕನೋರ್ವ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಆತ್ಮಹತ್ಯೆಗೈದ ಯುವಕನನ್ನು ಅತ್ತಾವರ ನಿವಾಸಿ ಗೌರೀಶ್(35)ಎಂದು ಗುರುತಿಸಲಾಗಿದೆ. ಗೌರೀಶ್ ಅವರು ದಿ.ಎ. ಪ್ರಕಾಶ್ ಮತ್ತು ದಿ.ಯಶವಂತಿ ದಂಪತಿಯ ಕೊನೆಯ ಪುತ್ರ. ಗೌರೀಶ್ ಅವರು ತನ್ನ ಅಣ್ಣ ಅಕೇಶ್(37)ಜೊತೆ ಅತ್ತಾವರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರದಂದು ಅಕೇಶ್ ಇದ್ದಕ್ಕಿದ್ದಂತೆ ಹೃದಯಾಘಾತದಲ್ಲಿ ಮನೆಯೊಳಗಿನ ಕೊಠಡಿಯಲ್ಲಿ ಮೃತಪಟ್ಟಿದ್ದರು. ಇದರಿಂದ ಮನನೊಂದು ಗೌರೀಶ್ ಮಂಗಳವಾರದಿಂದಲೇ ಮನೆಯನ್ನು ಬಿಟ್ಟಿದ್ದ ಎನ್ನಲಾಗಿದೆ.

ಆದರೆ, ಬುಧವಾರ ನಸುಕಿನ ವೇಳೆ ಗೌರೀಶ್ ತೆರಳಿದ್ದ ಬೈಕ್ ಉಳ್ಳಾಲ ನೇತ್ರಾವತಿ ಸೇತುವೆ ತಟದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಮತ್ತು ಪೊಲೀಸರು ಎರಡು ದಿವಸ ಗೌರೀಶ್‌ಗಾಗಿ ಶೋಧ ಕಾರ್ಯ ನಡೆಸಿದ್ದರು. ಗುರುವಾರ ಸಂಜೆ ಗೌರೀಶ್ ಮೃತದೇಹವು ಪಣಂಬೂರು ಕಡಲಕಿನಾರೆಯಲ್ಲಿ ಪತ್ತೆಯಾಗಿದೆ. ತಮ್ಮ ಗೌರೀಶ್ ಪತ್ತೆಯಾಗದ ಹಿನ್ನೆಲೆಯಲ್ಲಿ ಅಣ್ಣ ಅಕೇಶ್ ದೇಹ ದಫನ ಮಾಡದೆ ಅತ್ತಾವರದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.

ಗೌರೀಶ್ ಅತ್ತಾವರದಲ್ಲಿ ಟಯರ್ ಪಂಚರ್ ಅಂಗಡಿಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News