×
Ad

ಹಾಸ್ಯಕವಿ ದುಂಡಿರಾಜ್‌ರಿಗೆ ಅಭಿನಂದನಾ ಸಮಾರಂಭ

Update: 2016-09-01 20:55 IST

ಮಂಗಳೂರು, ಸೆ.1: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಾಸ್ಯ ಕವಿ ದುಂಡಿರಾಜ್ ಅವರು ಬ್ಯಾಂಕ್ ವೃತ್ತಿಯಲ್ಲಿ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ‘ಬ್ಯಾಂಕಿನಿಂದ ನಿವೃತ್ತಿ ಸಾಹಿತ್ಯದಲ್ಲಿ ಪ್ರವೃತ್ತಿ’ ಎಂಬ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಬ್ಯಾಂಕಿನಿಂದ ನಿವೃತ್ತಿಯಾದ ದುಂಡಿರಾಜ್ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ, ದುಂಡಿರಾಜ್ ಅವರ ಚುಟುಕು ಕವಿತೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಆಕರ್ಷಿತಗೊಂಡಿದ್ದಾರೆ. ಅವರ ಚುಟುಕುಗಳ ಮೂಲಕ ಕಚ್ಚಿಸಿಕೊಂಡವರು, ಕಚಗುಳಿಗೊಂಡವರು ಮತ್ತು ಪಾಠ ಕಲಿತವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ದ.ಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಹರಿನಾಥ್ ಎಂ., ಮನಪಾ ಸಚೇತಕ ಶಶಿಧರ್ ಹೆಗ್ಡೆ, ನಿವೃತ್ತ ಪ್ರೊಫೆಸರ್ ಸತ್ಯ ನಾರಾಯಣ ಮಲ್ಲಿಪಟ್ಣ, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಹಾಸ್ಯ ಸಾಹಿತಿ ದುಂಡಿರಾಜ್ ಅವರ ಪತ್ನಿ ಭಾರತಿ, ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ.ಪುರಾಣಿಕ್, ಕಸಾಪ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News