×
Ad

ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ: ಜಿಲ್ಲಾಧಿಕಾರಿಗೆ ಸಚಿವ ಖಾದರ್ ಸೂಚನೆ

Update: 2016-09-01 21:45 IST

ಮಂಗಳೂರು, ಸೆ.1: ಜಿಲ್ಲೆಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಸೃಷ್ಟಿಸಲಾಗಿರುವ ಸ್ಕಾರ್ಪ್ ಹೆಸರಿನ ವಿವಾದವನ್ನು ಶೀಘ್ರ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಸಚಿವ ಯು.ಟಿ.ಖಾದರ್‌ರವರು ದ.ಕ. ಜಿಲ್ಲಾಧಿಕಾರಿ ಜಗದೀಶ್‌ರಿಗೆ ಸೂಚಿಸಿದ್ದಾರೆ.

ಸ್ಕಾರ್ಪ್ ವಿವಾದದ ಕುರಿತಂತೆ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿರುವ ಸಚಿವರು, ಶಾಲಾ-ಕಾಲೇಜುಗಳಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗದಿರುವಂತೆ ನೋಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು, ಕಾಲೇಜುಗಳ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರ ಜೊತೆ ಮಾತುಕತೆ ನಡೆಸಿ ಶೀಘ್ರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಖಾದರ್ "ವಾರ್ತಾಭಾರತಿ"ಗೆ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News