ಚಂದ್ರದರ್ಶನದ ಮಾಹಿತಿಗೆ ಮನವಿ
Update: 2016-09-01 21:58 IST
ಮಂಗಳೂರು, ಸೆ.1: ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವು ಸೆ.2ರ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಆಗುವ ಸಾಧ್ಯತೆ ಇದೆ. ಆದ್ದರಿಂದ ಚಂದ್ರದರ್ಶನವಾದಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್‌ರಿಗೆ ಮಾಹಿತಿ ನೀಡುವಂತೆ ಝೀನತ್ ಬಕ್ಷ್ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.