×
Ad

ನಿಧನ

Update: 2016-09-01 23:50 IST


ಕಾಂತಿಲಾಲ್ ಪ್ರಾಣ್‌ಲಾಲ್ ಪಟೇಲ್
ಮಂಗಳೂರು, ಸೆ.1: ಪಟೇಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮತ್ತು ಚೇರ್‌ಮೆನ್ ಕಾಂತಿಲಾಲ್ ಪ್ರಾಣ್‌ಲಾಲ್ ಪಟೇಲ್ (86) ಆ.31 ರಂದು ಕೊಚ್ಚಿನ್‌ನ ವೈತ್ತಿಲದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
 ಕೇರಳದ ಕೊಚ್ಚಿನ್‌ನಲ್ಲಿ ಕಳೆದ 6 ದಶಕಗಳಿಂದ ವಾಣಿಜ್ಯೋದ್ಯಮದಲ್ಲಿ ತೊಡಗಿಸಿಕೊಂಡ ಇವರು, ‘ಪಟೇಲ್ ಬಾಬುಲಾಲ್ ಪ್ರಾಣ್‌ಲಾಲ್ ಆ್ಯಂಡ್ ಬ್ರದರ್ಸ್‌, ಪಟೇಲ್ ವಿನೀರ್ಸ್‌ (ಪ್ರೈ.) ಲಿಮಿಟೆಡ್, ಭರತ್ ಕುಮಾರ್ ಪಟೇಲ್ ಆ್ಯಂಡ್ ಕೋ, ಆಡಿ ಕೊಚ್ಚಿ ಆ್ಯಂಡ್ ಆಡಿ ಕೊಝಿಕೋಡ್, ಶಿನ್‌ರಾಯ್ ಯಮಹಾ, ಸ್ಪೈಸ್ ಕೋಸ್ಟ್ ಹಾರ್ಲೆ-ಡೇವಿಡ್‌ಸನ್ ಆ್ಯಂಡ್ ಮಲಬಾರ್ ಹಾರ್ಲೆ-ಡೇವಿಡ್‌ಸನ್, ಎಕ್ಸೆಲ್ಶರ್ ನಿಸ್ಸಾನ್ ಅಲ್ಲದೆ ಕೊಚ್ಚಿನ್, ತಿರುವನಂತಪುರಂ, ಮಂಗಳೂರು, ಅಲೆಪ್ಪಿನಗರಗಳಲ್ಲಿ ಪೆನಿನ್ಸುಲಾರ್ ಹೋಂಡಾ ಶೋರೂಂಗಳನ್ನು ಹೊಂದಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News