ಹಳೆ ಆರೋಪಿ ಬಂಧನ
Update: 2016-09-01 23:56 IST
ಮಂಗಳೂರು, ಸೆ.1: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮ ರೆಸಿಕೊಂಡಿದ್ದ ಆರೋಪಿಯನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುದ್ರೋಳಿ ಸಿಪಿಸಿ ಕಾಂಪೌಂಡ್ ನಿವಾಸಿ ಅಬ್ದುಲ್ ಜಲೀಲ್ (24) ಎಂದು ಗುರುತಿಸಲಾಗಿದೆ.
2014ರಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜಲೀಲ್ ತಲೆಮರೆಸಿಕೊಂಡಿದ್ದ ಆರೋಪಿ.ಆತನ ಮೇಲೆ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿತ್ತು.