370 ಕೋಟಿ ವರ್ಷಗಳ ಹಿಂದೆಯೇ ಭೂಮಿಯಲ್ಲಿ ಜೀವವಿತ್ತು

Update: 2016-09-01 18:43 GMT

ಸಿಡ್ನಿ, ಸೆ. 1: ಭೂಮಿಯ ಮೇಲೆ ಜೀವ ಉಗಮ ನಾವು ಭಾವಿಸಿರುವುದಕ್ಕಿಂತಲೂ ಹಿಂದೆ ಸಂಭವಿಸಿದೆ ಎಂದು ಆಸ್ಟ್ರೇಲಿಯದ ವಿಜ್ಞಾನಿಗಳು ಹೇಳಿದ್ದಾರೆ. ತಮ್ಮ ವಾದವನ್ನು ಸಮರ್ಥಿಸುವ ಪಳೆಯುಳಿಕೆಗಳನ್ನು ಅವರು ಅನಾವರಣಗೊಳಿಸಿದ್ದಾರೆ. ಈ ಪಳೆಯುಳಿಕೆಗಳು 370 ಕೋಟಿ ವರ್ಷಗಳಷ್ಟು ಹಳೆಯವು.

ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆ ಆವೃತ ಪ್ರದೇಶದ ಅಂಚಿನುದ್ದಕ್ಕೂ ಇರುವ ಪ್ರಾಚೀನ ಬಂಡೆಗಳಲ್ಲಿ ಸಂರಕ್ಷಣೆಗೊಂಡ ರಚನೆಗಳು ಈ ಹಿಂದಿನ ದಾಖಲೀಕೃತ ಪಳೆಯುಳಿಕೆಗಳಿಗಿಂತ 22 ಕೋಟಿ ವರ್ಷಗಳಷ್ಟು ಹಿಂದಿನವು.

ಸುಮಾರು 450 ಕೋಟಿ ವರ್ಷಗಳ ಹಿಂದೆ ಭೂಮಿ ಸೃಷ್ಟಿಯಾದ ಕೆಲವೇ ಕೋಟಿ ವರ್ಷಗಳ ಬಳಿಕ ಜೀವ ರೂಪುಗೊಂಡಿದೆ ಎಂಬುದನ್ನು ಈ ಪಳೆಯುಳಿಕೆಗಳು ಸಾಬೀತುಪಡಿಸುತ್ತವೆ.

ಜೀವ ಉಗಮಕ್ಕೆ ಪೂರಕವಾದ ವಾತಾವರಣ ರೂಪುಗೊಂಡಿರುವುದು ಈ ಪಳೆಯುಳಿಕೆಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News